ಸುನಿತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಹೋಗಿದ್ದ ನೌಕೆ ಇಂದು ಭೂಮಿಗೆ ವಾಪಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದ ಬಾಹ್ಯಾಕಾಶ ನೌಕೆಯು ಇಂದು ಭೂಮಿಗೆ ಮರಳುತ್ತಿದೆ.

ಜೂನ್ ಮೊದಲ ವಾರದಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಬಾಹ್ಯಾಕಾಶಕ್ಕೆ ಕೊಂಡೊಯ್ದಿತ್ತು. ಬಳಿಕ ತಾಂತ್ರಿಕ ಸಮಸ್ಯೆ ಉಂಟಾಗಿ ಇಬ್ಬರೂ ಗಗನಯಾತ್ರಿಗಳು ಭೂಮಿಗೆ ಮರಳಲು ಸಾಧ್ಯವಾಗಲಿಲ್ಲ. ಇದೀಗ ಬಾಹ್ಯಾಕಾಶ ನೌಕೆಯು ಸಿಬ್ಬಂದಿ ಇಲ್ಲದೆ ಭೂಮಿಗೆ ಮರಳುತ್ತಿದೆ.

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮುಂದಿನ ವರ್ಷ ಫೆಬ್ರವರಿಯಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ. ಸ್ಟಾರ್ಲೈನರ್ ಸೆಪ್ಟೆಂಬರ್ 6 ರಂದು ತಡರಾತ್ರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಟೇಕ್ ಆಫ್ ಆಗಿದೆ. ಅದು ಇಂದು ಭೂಮಿಗೆ ತಲುಪುತ್ತದೆ. ಜಗತ್ತಿನ ವಿಜ್ಞಾನಿಗಳ ಕಣ್ಣು ಈ ಕಾರ್ಯಾಚರಣೆ ಮೇಲೆ ನೆಟ್ಟಿದೆ.

ಭಾರತೀಯ ಕಾಲಮಾನದ ಸ್ಟಾರ್ಲೈನರ್ ಸೆಪ್ಟೆಂಬರ್ 6ರ ಮಧ್ಯರಾತ್ರಿ 3:30ಕ್ಕೆ ಬಾಹ್ಯಾಕಾಶ ಕೇಂದ್ರದಿಂದ ಟೇಕ್ ಆಫ್ ಆಗಿದೆ. ಇಂದು ಬೆಳಗ್ಗೆ 9:30ರ ಸುಮಾರಿಗೆ ಭೂಮಿಗೆ ಇಳಿಯಲಿದೆ. ಸ್ಟಾರ್ಲೈನರ್ ನ್ಯೂ ಮೆಕ್ಸಿಕೋದಲ್ಲಿ ಇಳಿಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!