ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಈಗ ಎಲ್ಲೆಲ್ಲೂ ‘ಗದರ್ 2’ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದರೂ ಈ ಸಿನಿಮಾದ ಅಬ್ಬರ ನಿಲ್ಲುತ್ತಿಲ್ಲ. ನಟ ಸನ್ನಿ ಡಿಯೋಲ್ ಅವರಿಗೆ ‘ಗದರ್ 2’ ಸಿನಿಮಾದ ಯಶಸ್ಸಿನಿಂದ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾದ ನಾಗಾಲೋಟ ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಪ್ರಿಯರಿಗೆ ಈ ಚಿತ್ರ ಇಷ್ಟವಾಗಿದೆ. ಬಹುವರ್ಷಗಳ ಬಳಿಕ ಸನ್ನಿ ಡಿಯೋಲ್ ಅವರು ಇಷ್ಟು ದೊಡ್ಡ ಸಕ್ಸಸ್ ಕಂಡಿದ್ದಾರೆ. ಆ ಖುಷಿಯನ್ನು ಅವರು ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ.
ಚಿತ್ರದ ನಾಯಕಿ ಅಮೀಷಾ ಪಟೇಲ್ ಜೊತೆ ಅವರು ದುಬೈಗೆ ತೆರಳಿದ್ದು, ಅಲ್ಲಿ ‘ಗದರ್ 2’ ಸಕ್ಸಸ್ ಮೀಟ್ ನಡೆದಿದೆ. ಆ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ಈ ಗೆಲುವಿಗಾಗಿ ಸನ್ನಿ ಡಿಯೋಲ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ದುಬೈನ ಸ್ಟಾರ್ ಸಿನಿಮಾಸ್ ಮಲ್ಟಿಪ್ಲೆಕ್ಸ್ನಲ್ಲಿರುವ ಎಲ್ಲಾ 10 ಪರದೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ಪ್ರದರ್ಶನ ಆಗಿದ್ದು, ಅಲ್ಲಿನ ಪ್ರೇಕ್ಷಕರಿಂದ ಈ ಪರಿ ರೆಸ್ಪಾನ್ಸ್ ಸಿಕ್ಕಿರುವುದಕ್ಕೆ ಚಿತ್ರತಂಡ ಫುಲ್ ಖುಷಿ ಆಗಿದೆ. ನಟಿ ಅಮೀಷಾ ಪಟೇಲ್ ಜೊತೆ ಸನ್ನಿ ಡಿಯೋಲ್ ಅವರು ನಗು ನಗುತ್ತಾ ಪೋಸ್ ನೀಡಿದ್ದಾರೆ.
‘ಗದರ್ 2’ ಸಿನಿಮಾದ ಕಲೆಕ್ಷನ್ 336 ಕೋಟಿ ರೂ. ದಾಟಿದ್ದು, ಎರಡನೇ ವೀಕೆಂಡ್ನಲ್ಲೂ ಈ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನೂ ಒಂದಷ್ಟು ದಿನಗಳ ಕಾಲ ಈ ಚಿತ್ರದ ಹವಾ ಮುಂದುವರಿಯಲಿದೆ. ಈಗಾಗಲೇ ಅನೇಕ ಸ್ಟಾರ್ ನಟರ ಸಿನಿಮಾಗಳ ದಾಖಲೆಯನ್ನು ‘ಗದರ್ 2’ ಚಿತ್ರ ಉಡೀಸ್ ಮಾಡಿದೆ.