ಪ್ರಕೃತಿ ನಮಗೆ ನೀಡಿರುವ ಅದ್ಭುತ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು. ಕಡು ನೇರಳೆ ಬಣ್ಣದ, ತಿನ್ನಲು ಲಘು ಒಗರು ಮತ್ತು ಸಿಹಿ ಮಿಶ್ರಿತ ರುಚಿ ಹೊಂದಿರುವ ಈ ಹಣ್ಣು ಕೇವಲ ನಾಲಿಗೆಗೆ ರುಚಿ ನೀಡುವುದಷ್ಟೇ ಅಲ್ಲ, ನೈಸರ್ಗಿಕ ಔಷಧೀಯ ಗುಣಗಳ ಭಂಡಾರವಾಗಿದೆ. ಆಯುರ್ವೇದದಲ್ಲಿ ನೇರಳೆ ಹಣ್ಣು, ಅದರ ಎಲೆ, ತೊಗಟೆ ಮತ್ತು ಬೀಜಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ವಿಟಮಿನ್ ಸಿ, ಕಬ್ಬಿಣದ ಅಂಶ, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ
ಮಧುಮೇಹ ನಿಯಂತ್ರಣಕ್ಕೆ ನೈಸರ್ಗಿಕ ಮದ್ದು
ನೇರಳೆ ಹಣ್ಣು ಮಧುಮೇಹಿಗಳಿಗೆ ಒಂದು ವರದಾನ. ಇದರಲ್ಲಿರುವ ‘ಜಾಂಬೋಲಿನ್’ಮತ್ತು ‘ಜಾಂಬೋಸಿನ್’ ಎಂಬ ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಇವು ದೇಹದಲ್ಲಿ ಪಿಷ್ಟವನ್ನು ಗ್ಲೂಕೋಸ್ ಆಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಹಣ್ಣು ಮಾತ್ರವಲ್ಲದೆ, ಇದರ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಪ್ರತಿದಿನ ಸೇವಿಸುವುದರಿಂದ ಶುಗರ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
ರಕ್ತಹೀನತೆ ನಿವಾರಣೆ
ದೇಹದಲ್ಲಿ ರಕ್ತದ ಕೊರತೆ ಅಥವಾ ಹಿಮೋಗ್ಲೋಬಿನ್ ಕಡಿಮೆಯಿರುವವರಿಗೆ ನೇರಳೆ ಹಣ್ಣು ಅತ್ಯುತ್ತಮ ಆಹಾರ. ಇದರಲ್ಲಿ ಕಬ್ಬಿಣದ ಅಂಶ ಮತ್ತು ವಿಟಮಿನ್ ಸಿ ಹೇರಳವಾಗಿದೆ. ವಿಟಮಿನ್ ಸಿ ದೇಹವು ಕಬ್ಬಿಣದ ಅಂಶವನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ರಕ್ತದ ಉತ್ಪತ್ತಿ ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ದೂರವಾಗುತ್ತದೆ.
ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಆರೋಗ್ಯ ಸುಧಾರಣೆ
ನೇರಳೆ ಹಣ್ಣಿನಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಮಲಬದ್ಧತೆ, ಗ್ಯಾಸ್, ಎದೆಯುರಿ ಮತ್ತು ಅಜೀರ್ಣದಂತಹ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರ. ಹೊಟ್ಟೆಯ ಅಲ್ಸರ್ ನಿವಾರಣೆಗೂ ಇದರ ರಸ ಉಪಯುಕ್ತವಾಗಿದೆ.
ಹೃದಯದ ಆರೋಗ್ಯಕ್ಕೆ ರಕ್ಷಣೆ
ಇದರಲ್ಲಿ ಪೊಟ್ಯಾಸಿಯಮ್ ಅಂಶ ಸಮೃದ್ಧವಾಗಿದೆ. ಪ್ರತಿ 100 ಗ್ರಾಂ ನೇರಳೆ ಹಣ್ಣಿನಲ್ಲಿ ಸುಮಾರು 55 ಮಿಲಿಗ್ರಾಂ ಪೊಟ್ಯಾಸಿಯಮ್ ಇರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದರಿಂದ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.
ಇದನ್ನೂ ಓದಿ:
ರೋಗನಿರೋಧಕ ಶಕ್ತಿ ಹೆಚ್ಚಳ
ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಸಮಯದಲ್ಲಿ ಹರಡುವ ಸೋಂಕುಗಳು ಮತ್ತು ಜ್ವರ ತಡೆಯಲು ನೇರಳೆ ಹಣ್ಣು ಸಹಕಾರಿ. ಇದರಲ್ಲಿರುವ ವಿಟಮಿನ್ ಸಿ ಮತ್ತು ಶಕ್ತಿಯುತ ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತವೆ.
ಕಾಂತಿಯುತ ತ್ವಚೆ ಮತ್ತು ಮುಖದ ಸೌಂದರ್ಯ
ನೇರಳೆ ಹಣ್ಣು ನೈಸರ್ಗಿಕವಾಗಿ ರಕ್ತವನ್ನು ಶುದ್ಧೀಕರಿಸುತ್ತದೆ. ರಕ್ತ ಶುದ್ಧಿಯಾಗುವುದರಿಂದ ಚರ್ಮದ ಆರೋಗ್ಯ ತಾನಾಗಿಯೇ ಸುಧಾರಿಸುತ್ತದೆ. ಮುಖದ ಮೇಲಿನ ಮೊಡವೆಗಳು, ಕಪ್ಪು ಕಲೆಗಳು ಮತ್ತು ಸುಕ್ಕುಗಳು ಕಡಿಮೆಯಾಗಿ ತ್ವಚೆ ಕಾಂತಿಯುತವಾಗುತ್ತದೆ.



