October 6, 2026
Tuesday, October 6, 2026
spot_img

ಸೂಪರ್ ಸ್ನ್ಯಾಕ್! ಗರಿಗರಿಯಾದ ನುಗ್ಗೆ ಸೊಪ್ಪಿನ ಪಕೋಡ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ

ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ಸವಿಯಲು ನುಗ್ಗೆ ಸೊಪ್ಪಿನ ಪಕೋಡ ಬೆಸ್ಟ್. ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗೂ ವಿಟಮಿನ್‌ಗಳು ಸಮೃದ್ಧವಾಗಿದ್ದು, ರುಚಿಯ ಜೊತೆಗೆ ಆರೋಗ್ಯಕ್ಕೂ ಲಾಭಕರವಾಗಿದೆ.

ಬೇಕಾಗುವ ಸಾಮಗ್ರಿಗಳು

ಕಡಲೆ ಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 2 ಚಮಚ
ನುಗ್ಗೆ ಸೊಪ್ಪು – 1 ಕಪ್
ಈರುಳ್ಳಿ – 1
ಹಸಿಮೆಣಸಿನಕಾಯಿ – 2
ಜೀರಿಗೆ – 1 ಚಮಚ
ಇಂಗು – ಚಿಟಿಕೆ
ಅರಿಶಿನ ಪುಡಿ – ¼ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಬಿಸಿ ಎಣ್ಣೆ – 2 ಚಮಚ
ಕರಿಯಲು ಎಣ್ಣೆ – ಅಗತ್ಯವಿರುವಷ್ಟು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಇಂಗು, ಅರಿಶಿನ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬಿಸಿ ಎಣ್ಣೆ ಸೇರಿಸಿ ಕೈಯಿಂದ ಕಲಸಿ.

ಈ ಮಿಶ್ರಣಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ನುಗ್ಗೆ ಸೊಪ್ಪು ಸೇರಿಸಿ ಚೆನ್ನಾಗಿ ಕಲಸಿ. ಅಗತ್ಯವಿರುವಷ್ಟು ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಗಟ್ಟಿಯಾದ ಪಕೋಡ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಂತೆ ಎಣ್ಣೆಗೆ ಬಿಡಿ. ಮಧ್ಯಮ ಉರಿಯಲ್ಲಿ ಎರಡೂ ಬದಿಗಳು ಹೊಂಬಣ್ಣ ಬರುವವರೆಗೆ ಕರಿದು ತೆಗೆದರೆ ಗರಿಗರಿಯಾದ ನುಗ್ಗೆ ಸೊಪ್ಪಿನ ಪಕೋಡ ಸವಿಯಲು ಸಿದ್ಧ.

Must Read