‘ಚಾರ್ಲಿ’ಗೆ ತಲೈವಾ ಕೂಡಾ ಫಿದಾ: ಶೆಟ್ರ ಟೀಮ್‌ಗೆ ಮತ್ತಷ್ಟು ‘ಬೂಸ್ಟರ್ ಡೋಸ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

’777 ಚಾರ್ಲಿ’ಗೆ ತಲೈವಾ ಸೂಪರ್ ಸ್ಟಾರ್ ರಜನೀಕಾಂತ್ ಅವರೇ ಫಿದಾ ಆಗಿದ್ದಾರೆ!.  ಚಿತ್ರ ವೀಕ್ಷಿಸಿರುವ ರಜನಿ, ರಕ್ಷಿತ್ ಶೆಟ್ಟಿ ಅವರಿಗೆ ಖುದ್ದಾಗಿ ಕರೆ ಮಾಡಿದ್ದು, ಚಿತ್ರದ ಬಗ್ಗೆ ವಿಸ್ಮಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇಕಿಂಗ್, ಕಥೆ, ವಿನ್ಯಾಸಗಳ ಬಗ್ಗೆ ಮೆಚ್ಚುಗೆ ಸೂಚಿಸಿ ಸುದೀರ್ಘ ಸಮಯ ಮಾತನಾಡಿದ್ದಾರೆ. ಈ ಬಗ್ಗೆ ಚಾರ್ಲಿ ನಟ ರಕ್ಷಿತ್ ಶೆಟ್ಟಿ ಅವರೇ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ.

ಮನುಷ್ಯ, ಶ್ವಾನಗಳ ನಡುವಿನ ಸಂಬಂಧ, ಪ್ರೀತಿ ಕುರಿತಾದ ಕಥಾಹಂದರವಿರುವ ಚಿತ್ರ 777ಚಾರ್ಲಿಯನ್ನು ಅಭಿಮಾನಿಗಳು ಮಾತ್ರವಲ್ಲದೆ, ಸ್ಟಾರ್ ನಟ, ನಟಿಯರು, ಮುಖ್ಯಮಂತ್ರಿ, ಸಚಿವರು, ಶಾಸಕರುಗಳು ಸೇರಿದಂತೆ ಹಲವರು ಈಗಾಗಲೇ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೀಗ ತಲೈವಾ ಕೂಡಾ ಮೆಚ್ಚಿಕೊಂಡಿರುವುದು ಚಿತ್ರ ತಂಡಕ್ಕೆ ಹೊಸ ಜೋಶ್ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!