CINE | ಅಂಬಿ ಮಗನ ಮದುವೆಗೆ ಬಂದ ಸೂಪರ್ ಸ್ಟಾರ್ ರಜನೀಕಾಂತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಹಾಗೂ ಅವಿವ ಬಿಡಪ ಇಂದು ಹಸೆಮಣೆ ಏರಿದ್ದಾರೆ.
ಈ ನವಜೋಡಿಗೆ ಶುಭ ಹಾರೈಸಲು ಖುದ್ದು ಸೂಪರ್ ಸ್ಟಾರ್ ರಜನೀಕಾಂತ್ ಆಗಮಿಸಿದ್ದಾರೆ. ಕುಟುಂಬಸ್ತರು ಹಾಗೂ ಆತ್ಮೀಯರಿಗೆ ಮಾತ್ರ ಮದುವೆಗೆ ಆಮಂತ್ರಣ ನೀಡಲಾಗಿದ್ದು, ರಜನೀಕಾಂತ್ ಜೋಡಿಗೆ ಶುಭ ಹಾರೈಸಿದ್ದಾರೆ.

ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ ಟಾಲಿವುಡ್ ಸೆಲೆಬ್ರಿಟಿಸ್ ಕೂಡ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಜೂ.7 ರಂದು ಪ್ಯಾಲೇಸ್ ಗ್ರೌಂಡ್‌ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದ್ದು, ಹೆಚ್ಚಿನ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ. ಇಂದು ಆಪ್ತರು ಹಾಗೂ ಕುಟುಂಬದವರು ನವಜೋಡಿಗೆ ಹರಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!