Saturday, April 1, 2023

Latest Posts

ದುರ್ಬಲರ ಕಲ್ಯಾಣಕ್ಕೆ ಪೂರಕ ಬಜೆಟ್ : ವೀರಣ್ಣ ಚರಂತಿಮಠ

ಹೊಸದಿಗಂತ ವರದಿ ಬಾಗಲಕೋಟೆ :

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಮಹಿಳೆಯರು,ಯುವ ಶಕ್ತಿ ,ದುರ್ಬಲರ ಕಲ್ಯಾಣಕ್ಕೆ ಪೂರಕವಾದ ಮುಂಗಡಪತ್ರ ಮಂಡಿಸಿದ್ದು, ಇದೊಂದು ಜನಪರ ಬಜೆಟ್ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.

ದೇಶದ ಆರ್ಥಿಕ ಬೆಳವಣಿಗೆ, ಬಲಿಷ್ಠ ಭಾರತಕ್ಕೆ ಸಹಕಾರಿಯಾಗಲಿದೆ. ಕರ್ನಾಟಕದ ನೀರಾವರಿ,ರೇಲ್ವೆ ಮಾರ್ಗ ಅಭಿವ್ರದ್ದಿಗೆ ಹೆಚ್ಚಿನ ನೆರವು ದೊರೆತಿದೆ. ಯಾವುದೇ ಪೊಳ್ಳು ಭರವಸೆ, ರಾಜಕೀಯ ಪ್ರಚಾರಕ್ಕೆ ಆಸ್ಪದ ನೀಡದ ಬಜೆಟ್ ಜನಪರವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!