Tuesday, March 28, 2023

Latest Posts

ಬಿಜೆಪಿ ಆಡಳಿತ ಬೆಂಬಲಿಸಿ ಮತ್ತೊಮ್ಮೆ ಕರ್ನಾಟಕದಲ್ಲಿ ಆಡಳಿತಾವಕಾಶ ಕೊಡಿ: ಭೂಪೇಂದ್ರ ಯಾದವ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತವನ್ನು ಅಮೃತಕಾಲದಲ್ಲಿ ಸಶಕ್ತ – ಸಾಮರ್ಥ್ಯ ಶಾಲಿ ದೇಶವನ್ನಾಗಿ ಮಾಡುವ ಉದ್ದೇಶದಿಂದ ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸಿ ಜನರ ಮುಂದೆ ಹೋಗಲಿದ್ದೇವೆ. ಬಿಜೆಪಿ ಆಡಳಿತವನ್ನು ಬೆಂಬಲಿಸಿ ಮತ್ತೊಮ್ಮೆ ಬಿಜೆಪಿಗೆ ಕರ್ನಾಟಕದಲ್ಲಿ ಆಡಳಿತಾವಕಾಶ ಕೊಡಿ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮನವಿ ಮಾಡಿದರು.

ಅವರು ಬೆಂಗಳೂರಿನ ‘ಭಾರತೀಯ ವಿದ್ಯಾಭವನ’ದಲ್ಲಿ ನಡೆದ ಬಿಜೆಪಿ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನದ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ಪ್ರಣಾಳಿಕೆಯು ಒಂದು ಕುಟುಂಬವನ್ನು ಅಧಿಕಾರಕ್ಕೆ ತರುವ ಉದ್ದೇಶ ಹೊಂದಿಲ್ಲ. ಒಂದು ವರ್ಗವನ್ನು ಅಧಿಕಾರಕ್ಕೆ ತರುವ ಉದ್ದೇಶ ನಮ್ಮದಲ್ಲ ಎಂದು ತಿಳಿಸಿದರು.
ಭಾರತವು ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ವಸುಧೈವ ಕುಟುಂಬಕಂ ಚಿಂತನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮುಖಂಡ ಬ್ಯಾಟರಂಗೇಗೌಡ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!