ಹಿಜಾಬ್‌ ವಿರೋಧಿ ಪ್ರತಿಭಟನೆಗೆ ಬೆಂಬಲ: ಆಸ್ಕರ್‌ ವಿಜೇತ ನಟಿಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇರಾನ್‌ ದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಜಾಬ್‌ ವಿರೋಧಿ ಪ್ರತಿಭಟನೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಇರಾನ್ ಅಧಿಕಾರಿಗಳು ದೇಶದ ಅತ್ಯಂತ ಪ್ರಸಿದ್ಧ ನಟಿಯೊಬ್ಬರನ್ನು ಬಂಧಿಸಿದ್ದಾರೆ ಎಂದು ರಾಜ್ಯ ಮಾಧ್ಯಮ ಶನಿವಾರ ತಿಳಿಸಿದೆ.

ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ “ದಿ ಸೇಲ್ಸ್‌ಮ್ಯಾನ್” ನ ತಾರೆ ತಾರೆನೆಹ್ ಅಲಿದೋಸ್ಟಿ ಅವರನ್ನು ಹಿಜಾಬ್‌ ಪ್ರತಿಭಟನೆಗೆ ಬೆಂಬಲ ನೀಡಿದ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ. ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಮೊಹ್ಸೇನ್‌ ಶೇಕರಿ ಎಂಬ ವ್ಯಕ್ತಿಯೊಬ್ಬನಿಗೆ ಮರಣದಂಡನೆ ನಡೆಸಿರುವುದರ ವಿರುದ್ಧ ನಟಿ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ್ದರು. “ಅವರ ಹೆಸರು ಮೊಹ್ಸೆನ್ ಶೇಕರಿ. ಈ ರಕ್ತಪಾತವನ್ನು ನೋಡುತ್ತಿರುವ ಮತ್ತು ಕ್ರಮ ಕೈಗೊಳ್ಳದ ಪ್ರತಿಯೊಂದು ಅಂತರರಾಷ್ಟ್ರೀಯ ಸಂಸ್ಥೆಯು ಮಾನವೀಯತೆಗೆ ಅವಮಾನವಾಗಿದೆ” ಎಂದು ನಟಿ ಬರೆದಿದ್ದರು. ಇದೇ ಕಾರಣಕ್ಕೆ ನ್ಯಾಯಾಂಗ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ. ಆಕೆ ತನ್ನ ಪೋಸ್ಟ್‌ ಗೆ ಸರಿಯಾದ ಸಾಕ್ಷ್ಯ ಒದಗಿಸಿಲ್ಲ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ ಎನ್ನಲಾಗಿದೆ.

ಇದೇ ರೀತಿ ಪ್ರಚೋದನಕಾರಿ ಪೋಸ್ಟ್‌ ಗಳನ್ನು ಹಂಚಿಕೊಂಡಿರುವುದಕ್ಕಾಗಿ ಅಲಿದೋಸ್ಟಿ ಸೇರಿದಂತೆ ಹಲವಾರು ಇತರ ಇರಾನಿನ ಸೆಲೆಬ್ರಿಟಿಗಳನ್ನು ನ್ಯಾಯಾಂಗ ಸಂಸ್ಥೆಯಿಂದ ಕರೆಸಲಾಗಿದೆ” ಎಂದು ಮೂಲಗಳು ವರದಿ ಮಾಡಿವೆ. ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಇತ್ಯಾದಿ ವಿವರಗಳನ್ನು ನೀಡಲಾಗಿಲ್ಲ. ಈ ಹಿಂದೆಯೂ ಕೂಡ ಅಲಿದೋಸ್ಟಿ ಇರಾನ್ ಸರ್ಕಾರ ಮತ್ತು ಅದರ ಪೊಲೀಸ್ ಪಡೆಗಳನ್ನು ಟೀಕಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!