Sunday, September 25, 2022

Latest Posts

ದೇಶವಾಸಿಗಳಿಂದ ಹರ್ ಘರ್ ತಿರಂಗ ಅಭಿಯಾನಕ್ಕೆ ಸಾಥ್: ಪ್ರಧಾನಿ ಮೋದಿ ಸಂತಸ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ  75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಸಂಭ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹರ್ ಘರ್ ತಿರಂಗ ಅಭಿಯಾನಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ.

ಭಾರತ ಪ್ರತಿ ಪ್ರಜೆಯ ಮನೆ ಮನೆಯಲ್ಲಿ ತಿರಂಗ ಹಾರಿಸುವ ಮೂಲಕ ಈ ಅಭಿಯಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮನೆ, ಕಚೇರಿ, ಮೈದಾನ, ಐತಿಹಾಸಿಕ ಕಟ್ಟಡ, ಜಲಾಶಯ ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲಿ ರಾಷ್ಟ್ರ ಧ್ವಜ ಹಾರಾಡುತ್ತಿದೆ. ಇಂದು ಇಡೀ ದೇಶ ಕೇಸರಿ ಬಿಳಿ ಹಸಿರು ವರ್ಣಗಳಿಂದ ಕಂಗೊಳಿಸುತ್ತಿದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ದೇಶದಲ್ಲಿ ಹರ್ ಘರ್ ತಿರಂಗ ಅಭಿಯಾನಕ್ಕೆ ವ್ಯಕ್ತವಾಗಿರುವ ಸ್ಪಂದನೆ ಅತೀವ ಸಂತಸ ತಂದಿದೆ. ದೇಶ ಪ್ರೇಮ ಪ್ರತಿಯೊಬ್ಬರ ಮನದಲ್ಲಿ ಎದ್ದುಕಾಣುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ದೇಶದ ಪ್ರಮುಖ ನಗರ, ಐತಿಹಾಸಿಕ ಕಟ್ಟಡ ಸೇರಿದಂತೆ ಹಲವೆಡೆ ತಿರಂಗ ಧ್ವಜ, ತಿರಂಗ ಬೆಳಕಿನ ಚಿತ್ತಾರಗಳ ಕುರಿತು ಟ್ವೀಟ್ ಮಾಡಿದ್ದಾರೆ. ಮೋದಿ ಕರೆಗೆ ಬಿಜೆಪಿ ನಾಯಕರು ಮಾತ್ರವಲ್ಲ, ದೇಶದ ಸೆಲೆಬ್ರೆಟಿಗಳು, ಗಣ್ಯರು ಸೇರಿದಂತೆ ಭಾರತೀಯರು ತಿರಂಗ ಹಾರಿಸಿ ರಾಷ್ಟ್ರಪ್ರೇಮ ಮೆರೆದಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 3 ದಿನಗಳ ‘ಹರ್‌ ಘರ್‌ ತಿರಂಗಾ’ ಅಭಿಯಾನ ದೇಶಾದ್ಯಂತ ಶನಿವಾರ ಸಂಭ್ರಮದಿಂದ ಆರಂಭವಾಗಿದೆ. ಎಲ್ಲೆಡೆ ದೇಶಭಕ್ತಿಯ ವಾತಾವರಣ ನಿರ್ಮಾಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!