ನೂಪುರ್‌ ಶರ್ಮಾ ಗೆ ಬೆಂಬಲ: ಡಚ್‌ ಸಂಸದನಿಗೆ ಬಂತು ಜೀವ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನೂಪುರ್‌ ಶರ್ಮಾ ಅವರ ಪರವಾಗಿ ಟ್ವೀಟ್‌ ಮಾಡಿದ್ದ ಡಚ್‌ ಸಂಸದ, ‘ಪಾರ್ಟಿ ಫಾರ್‌ ಫ್ರೀಡಂ’ನ ಮುಖ್ಯಸ್ಥ ಗೀರ್ಟ್‌ ವೈಲ್ಡರ್ಸ್‌ಗೆ ಜೀವ ಬೆದರಿಕೆಗಳು ಬಂದಿವೆ.

ಈ ಕುರಿತು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ಇದಕ್ಕಾಗಿಯೇ ನಾನು ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿದ್ದು. ನೂರಾರು ಕೊಲೆ ಬೆದರಿಕೆಗಳು ನನಗೆ ಬಂದಿವೆ. ಇವುಗಳು, ನಾನು ಮತ್ತಷ್ಟು ದೃಢವಾಗಿ ಮತ್ತು ಹೆಮ್ಮೆಯಿಂದ ಅವರನ್ನು ಬೆಂಬಲಿಸುವಂತೆ ಮಾಡಿವೆ. ಯಾಕೆಂದರೆ ಕೆಟ್ಟದ್ದು ಎಂದಿಗೂ ಗೆಲ್ಲಲಾರದುಎಂದಿಗೂ’ ಎಂದು ಗೀರ್ಟ್‌ ವೈಲ್ಡರ್ಸ್‌ ಬರೆದುಕೊಂಡಿದ್ದಾರೆ.

ಪ್ರವಾದಿ ಮೊಹಮ್ಮದ್ ಅವರ ಕುರಿತು ಹೇಳಿಕೆ ನೀಡಿದ ನೂಪುರ್‌ ಶರ್ಮಾ ಅವರನ್ನು ಗೀರ್ಟ್‌ ವೈಲ್ಡರ್ಸ್‌ ಬೆಂಬಲಿಸಿದ್ದರು.
‘ನಾನು ಭಾರತೀಯನೂ ಅಲ್ಲ, ಹಿಂದುವೂ ಅಲ್ಲ. ಆದರೆ ನನಗೆ ಒಂದು ವಿಷಯ ಗೊತ್ತು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವುದನ್ನು ಸಮರ್ಥಿಸುವುದು, ಪ್ರವಾದಿ ಬಗ್ಗೆ ಸತ್ಯ ಹೇಳುವುದು ಸರಿಯಲ್ಲ ಎಂಬ ವಾದವೇ ಜಾತ್ಯತೀತತೆಯ ಅರ್ಥ ಆಗಬಾರದು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವ ಸಂದರ್ಭದಲ್ಲಿ ನೂಪುರ್ ಶರ್ಮಾ ಪ್ರತಿಕ್ರಿಯಿಸಿರುವುದು ಸಂಪೂರ್ಣ ಸಮರ್ಥನೀಯ’ ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!