Wednesday, August 17, 2022

Latest Posts

ಶ್ರೀಲಂಕಾದ ಮಾಜಿ ಪಿಎಂ ಮಹಿಂದಾ ರಾಜಪಕ್ಸ ಪಲಾಯನಕ್ಕೆ ಬ್ರೇಕ್ ಹಾಕಿದ ‘ಸುಪ್ರೀಂ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದ ಬೆನ್ನೆಲ್ಲೇ ಗೊಟಬಯ ಅವರ ಸಹೋದರರಾದ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಮಾಜಿ ಹಣಕಾಸು ಸಚಿವ ಬಾಸಿಲ್ ರಾಜಪಕ್ಸ, ಅವರು ದೇಶ ಬಿಟ್ಟು ಹೋಗದಂತೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದೆ.
ಜುಲೈ 28ರ ವರೆಗೆ ನ್ಯಾಯಾಲಯದ ಅನುಮತಿ ಇಲ್ಲದೆಯೇ ಮಾಜಿ ಸಚಿವರು ದೇಶ ಬಿಟ್ಟು ಹೊರ ಹೋಗಬಾರದು ಎಂದು ಶ್ರೀಲಂಕಾದ ಸುಪ್ರೀಂಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ ಎಂದು ಶ್ರೀಲಂಕಾದ ಡೈಲಿ ಮಿರರ್ ವರದಿ ಮಾಡಿದೆ.
ಗೊಟಬಯ ರಾಜಪಕ್ಸ ಅವರು ಈಗಾಗಲೇ ದೇಶ ತೊರೆದು ಮಲ್ಡೀವ್ಸ್ ಗೆ ಹೋಗಿ ಅಲ್ಲಿಂದ ಸಿಂಗಾಪುರದಲ್ಲಿ ಹೋಗಿ ನೆಲೆಸಿದ್ದಾರೆ.
ಇತ್ತ ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಪಣಕ್ಕೆ ರಾಜಪಕ್ಸ ಅವರ ಆಡಳಿತವೇ ಕಾರಣ ಎಂದು ತಿಂಗಳುಗಳಿಂದ ಇಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದು, ಜನಾಕ್ರೋಶ ತೀವ್ರವಾದಾಗ ಗೊಟಬಯ ಪಲಾಯನ ಮಾಡಿದ್ದಾರೆ.
ಇನ್ನು ಶ್ರೀಲಂಕಾದ ಸಂಸತ್ ಜುಲೈ 20ರಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿವರೆಗೆ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!