ದಂಪತಿಯು ವಿಚ್ಛೇದನಕ್ಕೆ 6 ತಿಂಗಳು ಕಾಯುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್‌ ತೀರ್ಪು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಇಂದು ಮಹತ್ವದ ತೀರ್ಪು ನೀಡಿದೆ.

ಕೌಟುಂಬಿಕ ನ್ಯಾಯಾಲಯಕ್ಕೆ ಒಪ್ಪಿಸದೇ ಪರಸ್ಪರ ಸಮ್ಮತಿಯಿಂದ ದಂಪತಿಯು ಇನ್ನು ಮುಂದೆ ಆರು ತಿಂಗಳ ಕಾಲ ಕಾಯದೇ ವಿಚ್ಛೇದನ ಪಡೆದುಕೊಳ್ಳಬಹುದು ಎಂದು ಸಾಂವಿಧಾನಿಕ ಪೀಠದ ಜಸ್ಟೀಸ್‌ ಎಸ್.ಕೆ.ಕೌಲ್‌ ಅವರನ್ನೊಳಗೊಂಡ ಪೀಠ ಹೇಳಿದೆ.

ವಿಚ್ಛೇದನಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ನ್ಯಾಯಾಲಯ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಆರು ತಿಂಗಳ ಕಾಲಾವಕಾಶ ನೀಡುತ್ತಿತ್ತು. ಸಂವಿಧಾನದ 142ನೇ ವಿಧಿಯು ಬಾಕಿ ಇರುವ ವಿಚ್ಛೇದನ ಪ್ರಕರಣಗಳಲ್ಲಿ ಮದುವೆಯನ್ನು ರದ್ದುಗೊಳಿಸುವ ಪರಮಾಧಿಕಾರವನ್ನು ಸುಪ್ರೀಂಕೋರ್ಟ್‌ ಗೆ ನೀಡುತ್ತದೆ.

ಈ ಕುರಿತು ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ 2022ರ ಸೆಪ್ಟೆಂಬರ್‌ 29ರಂದು ಪೂರ್ಣಗೊಳಿಸಿ, ತೀರ್ಪನ್ನು ಕಾಯ್ದಿರಿಸಿತ್ತು.

ಈ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಸಾಂವಿಧಾನಿಕ ಪೀಠದ ಜಸ್ಟೀಸ್‌ ಗಳಾದ ಸಂಜಯ್‌ ಕಿಶನ್‌ ಕೌಲ್‌, ಸಂಜೀವ್‌ ಖನ್ನಾ, ಎಎಸ್‌ ಓಕಾ, ವಿಕ್ರಮ್‌ ನಾಥ್‌ ಮತ್ತು ಜೆ.ಕೆ.ಮಹೇಶ್ವರಿ ವಿಚಾರಣೆ ನಡೆಸಿದ್ದರು.

ವಿಚ್ಚೇದನೆ ಪಡೆಯುವ ದಂಪತಿಯು ಪ್ರಕ್ರಿಯೆ ಮುಗಿಯುವವರೆಗೂ ಅಂದರೆ ಆರು ತಿಂಗಳವರೆಗೂ ಜೊತೆಯಾಗಿಯೇ ಇರಬೇಕು ಎನ್ನುವುದು ಈ ಹಿಂದಿನ ಕಾನೂನಿನ ನಿಯಮವಾಗಿತ್ತು. ಇದು ಕಾನೂನಿನ ನಿಮಯದ ಜೊತೆಗೆ ಇಬ್ಬರ ನಡುವೆ ಹೊಂದಾಣಿಕೆಯಾಗಿ ಜೊತೆಯಾಗಿ ಜೀವನ ನಡೆಸುತ್ತಾರೆ ಎನ್ನುವ ಕಾಳಜಿಗೆ ಈ ರೀತಿಯ ಕಾನೂನುಗಳನ್ನು ಮಾಡಿತ್ತು. ಆದರೆ ಈಗ ಒತ್ತಡದ ಆಧಾರದಲ್ಲಿ ಜೀವನ ನಡೆಸುವ ಅಗತ್ಯ ಇಲ್ಲ ಎನ್ನುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ನ ಪೀಠ ಮಹತ್ವದ ಆದೇಶವನ್ನು ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!