Tuesday, March 28, 2023

Latest Posts

ಮುಕೇಶ್ ಅಂಬಾನಿ ಕುಟುಂಬ ಸದಸ್ಯರಿಗೆ ಝಡ್ ಪ್ಲಸ್ ಭದ್ರತೆ : ಸುಪ್ರೀಂ ನಿರ್ದೇಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಮಟ್ಟದ ಝಡ್ ಪ್ಲಸ್ ಭದ್ರತೆಯನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಮುಕೇಶ್‌ ಅಂಬಾನಿ ಅವರ ಕುಟುಂಬ ಇತ್ತೀಚೆಗೆ ಪದೇ ಪದೇ ಬೆದರಿಕೆ ಕರೆ ಎದುರಿಸುತ್ತಿದೆ. ದಾಳಿ ಬೆದರಿಕೆ, ಬಾಂಬ್ ಬೆದರಿಕೆ ಸೇರಿದಂತೆ ಹಲವು ಬೆದರಿಕೆ ಕರೆಗಳನ್ನು ಮುಂಬೈ ಹಾಗೂ ನಾಗ್ಪುರ ಪೊಲೀಸರು ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಭಾರತ ಮತ್ತು ವಿದೇಶಗಳಲ್ಲಿ ಉನ್ನತ ಮಟ್ಟದ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲು ಕೋರ್ಟ್ ಸೂಚಿಸಿದೆ. ಭಾರತ ಅಥವಾ ವಿದೇಶದಲ್ಲಿ ಅತ್ಯುನ್ನತ ಮಟ್ಟದ ಝಡ್ ಪ್ಲಸ್ ಭದ್ರತೆಯನ್ನು ಒದಗಿಸುವ ಸಂಪೂರ್ಣ ವೆಚ್ಚವನ್ನು ಅವರು ಭರಿಸುತ್ತಾರೆ ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂ ಕೋರ್ಟ್ ಜಸ್ಟೀಸ್ ಕೃಷ್ಣ ಮುರಾರಿ, ಜಸ್ಚೀಸ್ ಅಹಸಾನುದ್ದೀನ್ ಅಮಾನುಲ್ಲಾಹ ಅವರನ್ನೊಳಗೊಂಡ ಪೀಠ ಈ ಮಹತ್ವದ ಆದೇಶವನ್ನು ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!