SHOCKING | 70 ವರ್ಷದ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿದ ‘ಸುಪುತ್ರ’, ಆಕೆ ಮಾಡಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಕಿಯೋಂಜರ್ ಜಿಲ್ಲೆಯ ಸರಸಪಾತಿ ಗ್ರಾಮದಲ್ಲಿ ಸುಪುತ್ರನೊಬ್ಬ ಹೆತ್ತ ತಾಯಿಯನ್ನೇ ವಿದ್ಯುತ್ ಕಂಬಕ್ಕೆ ಕಟ್ಟಿದ್ದಾನೆ.

ತಾನು ತೋಟದಲ್ಲಿ ಬೆಳೆದಿದ್ದ ಹೂಕೋಸನ್ನು ಕಿತ್ತು ತಿಂದಿದ್ದಕ್ಕೆ ಕೋಪಗೊಂಡ ಪುತ್ರ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ವಿಕೃತಿ ಮೆರೆದಿದ್ದಾನೆ.

70 ವರ್ಷದ ತಾಯಿಯನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದು, ಫೋಟೊ ವೈರಲ್ ಆಗಿದೆ. ಸ್ಥಳೀಯರು ಕೂಡಲೇ ತಾಯಿಯನ್ನು ಕೆಳಗೆ ಇಳಿಸಿದ್ದಾರೆ. ತೋಟದಲ್ಲಿ ಹೂಕೋಸು ಕೀಳಲಾಗಿದೆ ಎಂದು ಆತನಿಗೆ ತಿಳಿದಿತ್ತು, ಅದನ್ನು ತಾಯಿಯೇ ಕಿತ್ತಿದ್ದಾರೆ ಎಂದು ವಿದ್ಯುತ್ ಕಂಬಕ್ಕೆ ಕಟ್ಟಿದ್ದಾನೆ.

ರಕ್ಷಿಸಲು ಬಂದ ಸ್ಥಳೀಯರಿಗೆ ಧಮ್ಕಿ ಹಾಕಿದ್ದಾನೆ. ಬಸುದೇವಪುರ ಕಮ್ಯುನಿಟಿ ಹೆಲ್ತ್ ಸೆಂಟರ್‌ಗೆ ತಾಯಿಯನ್ನು ಸ್ಥಳೀಯರು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!