ಆಭರಣ ವ್ಯಾಪಾರಿ ಕೈಯಲ್ಲಿ ಅರಳಿದ ಪ್ರಧಾನಿ ಮೋದಿಯವರ ಚಿನ್ನದ ಪ್ರತಿಮೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತ್ ರಾಜ್ಯದ ಸೂರತ್‌ನ ಆಭರಣ ವ್ಯಾಪಾರಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪ್ರತಿಮೆಯನ್ನು ರಚಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪ್ರಚಂಡ ಬಹುಮತದಿಂದ ಜಯಗಳಿಸಿದ ಸಂದರ್ಭದಲ್ಲಿ ಈ ಪ್ರತಿಮೆಯನ್ನು ರಚಿಸಲಾಗಿದೆ ಎಂದು ರಾಧಿಕಾ ಚೈನ್ಸ್ ಜ್ಯುವೆಲರಿ ಮಾಲೀಕ ಬಸಂತ್ ಬೋಹ್ರಾ ಹೇಳಿದ್ದಾರೆ. 182 ಸ್ಥಾನಗಳ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗೆದ್ದಿದೆ. ಇದನ್ನು ಗುರುತಿಸಲು 156 ಗ್ರಾಂ ಚಿನ್ನದಿಂದ ಈ ಪ್ರತಿಮೆಯನ್ನು ಮಾಡಲಾಗಿದೆ ಎಂದು ಹೇಳಿದರು. ಅನೇಕರು ಪ್ರತಿಮೆಯನ್ನು ಖರೀದಿಸಲು ಆಸಕ್ತಿ ತೋರಿಸಿದ್ದಾರೆ, ಆದರೆ ಅದನ್ನು ಮಾರಾಟ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗಿಲ್ಲ ಎಂದು ಬೋಹ್ರಾ ಹೇಳಿದರು.

ನಾನು ನರೇಂದ್ರ ಮೋದಿಯವರ ಅಭಿಮಾನಿಯೂ ಅಲ್ಲ…ನಾನು ಮೋದಿಯವರನ್ನು ಪುರಸ್ಕರಿಸಲು ಈ ವಿನ್ಯಾಸ ಮಾಡಿಲ್ಲ. ಆದರೆ, ಯಾಕೋ ಗೊತ್ತಿಲ್ಲ ಡಿಸೈನ್ ಮಾಡಬೇಕು ಅನ್ನಿಸಿ ರಚಿಸಿದೆ ಎಂದರು. ಇದಕ್ಕಾಗಿ 20 ಕಲಾವಿದರು ಮೂರು ತಿಂಗಳ ಕಾಲ ಶ್ರಮಿಸಿದರು. ಅಂತಿಮ ರೂಪದಿಂದ ನಾನು ತೃಪ್ತನಾಗಿದ್ದೇನೆ. ನಾನು ಈ ಪ್ರತಿಮೆ ಇನ್ನೂ ಮಾರಾಟ ಮಾಡಲು ಬಯಸುವುದಿಲ್ಲ. ಅದಕ್ಕಾಗಿಯೇ ಇದಕ್ಕೆ ಯಾವುದೇ ಬೆಲೆ ಕಟ್ಟಿಲ್ಲ ಎಂದು ಬೋಹ್ರಾ ಹೇಳಿದರು. ಈಆಭರಣ ವ್ಯಾಪಾರಿ ಮೂಲತಃ ರಾಜಸ್ಥಾನಕ್ಕೆ ಸೇರಿದವರು. ಅವರು ಬಹಳ ಹಿಂದೆಯೇ ಸೂರತ್‌ಗೆ ಬಂದು ನೆಲೆಸಿದ್ದಾಗಿ ತಿಳಿಸಿದರು.

ಮೋದಿ ಪ್ರತಿಮೆಗೆ ಬಳಸಿರುವ ಚಿನ್ನ 11 ಲಕ್ಷ ರೂಪಾಯಿ. ಬೊಹ್ರಾಗೆ ಇಂತಹ ಚಿನ್ನದ ವಿಗ್ರಹಗಳನ್ನು ಮಾಡುವುದು ಹೊಸದಲ್ಲ. ಈ ಹಿಂದೆ ಏಕತೆಯ ಪ್ರತಿಮೆಯನ್ನು (ಸರ್ದಾರ್ ಪಟೇಲ್ ಪ್ರತಿಮೆ) ವಿನ್ಯಾಸಗೊಳಿಸಲಾಗಿತ್ತು. ಮೊದಲು ಮಾರಾಟದ ಬಗ್ಗೆ ಸ್ಪಷ್ಟವಾಗಿಲ್ಲದಿದ್ದರೂ, ಕೆಲವೇ ದಿನಗಳಲ್ಲಿ ಮಾರಾಟವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!