ASIAN GAMES 2023 | ಆರ್ಚರಿಯಲ್ಲಿ ಅಚ್ಚರಿ! ಬೆಳ್ಳಂಬೆಳಗ್ಗೆ ಭಾರತಕ್ಕೆ ಚಿನ್ನ, ಬೆಳ್ಳಿ, ಕಂಚು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಆರ್ಚರಿ ಮಹಿಳೆಯರ ಸಂಯುಕ್ತ ವೈಯಕ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ದೊರೆತಿದೆ.

Imageಜ್ಯೋತಿ ಸುರೇಖಾ ಚಿನ್ನದ ಪದಕ, ಅದಿತಿ ಸ್ವಾಮಿ ಕಂಚಿನ ಪದಕ ಹಾಗೂ ಪುರುಷರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರ ಓಜಸ್ ಡಿಯೋಟಾಲೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಅಭಿಷೇಕ್ ವರ್ಮಾ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.

Imageಈ ಬಾರಿ ಆರ್ಚರಿಯಲ್ಲಿ ಭಾರತ ಸಾಧನೆ ಮಾಡಿದ್ದು, ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ದೇಶದ ಅತ್ಯುತ್ತಮ ಸಾಧನೆ ಇದಾಗಿದೆ. ಈವರೆಗೂ ಭಾರತಕ್ಕೆ 24 ಚಿನ್ನದ ಪದಕಗಳು ದೊರೆತಿದ್ದು, ಇನ್ನಷ್ಟು ಪದಕಗಳು ದೊರೆಯುವ ನಿರೀಕ್ಷೆ ಇದೆ.

Image

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!