ದಿನಭವಿಷ್ಯ| ವೃತ್ತಿಯ ಒತ್ತಡವು ನಿಮ್ಮ ಕೌಟುಂಬಿಕ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಮನೆ, ಕಚೇರಿಯಲ್ಲಿ ಬಾಕಿ ಉಳಿದಿರುವ ನಿಮ್ಮ ಕಾರ್ಯ ಪೂರೈಸಲು ಸಫಲರಾಗುವಿರಿ. ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ.

ವೃಷಭ
ಉತ್ತಮ ನಿರ್ವಹಣೆ. ಆದಾಯ ಹೆಚ್ಚಳದ ಸಾಧ್ಯತೆಯಿದೆ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸಲಿದೆ. ಕೌಟುಂಬಿಕ ಸಮಾಧಾನ, ಶಾಂತಿ.

ಮಿಥುನ
ಹಣಕಾಸು ವ್ಯವಹಾರ ಇಂದು ಸುಗಮವಾಗಿ ಸಾಗಲಿದೆ. ವೃತ್ತಿ ವ್ಯವಹಾರ ವಿಸ್ತರಿಸಲು ಸಕಾಲ. ಆರೋಗ್ಯದ ಕುರಿತಂತೆ ಹೆಚ್ಚು ಕಾಳಜಿ ವಹಿಸಿರಿ.

ಕಟಕ
ನಿಮ್ಮ ನಾಯಕತ್ವ ಗುಣವು ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದು.ಸಮಸ್ಯೆ ಪರಿಹರಿಸುವಾಗ ತಾರ್ಕಿಕವಾಗಿ ಚಿಂತಿಸಿ. ಭಾವುಕರಾಗಿ ಅಲ್ಲ.

ಸಿಂಹ
ಯಾರದೋ ಮೇಲಿನ ಆಕರ್ಷಣೆಯಿಂದ ಬಾಲಿಶವಾಗಿ ವರ್ತಿಸದಿರಿ. ಪ್ರಬುದ್ಧತೆ ತೋರಿ. ಆರ್ಥಿಕ ವ್ಯವಹಾರದಲ್ಲಿ ಲಾಭ ಪಡೆಯುವಿರಿ.

ಕನ್ಯಾ
ಕೌಟುಂಬಿಕ ಸಮಸ್ಯೆ ಪರಿಹರಿಸಲು ಆದ್ಯತೆ ಕೊಡಿ. ಅದನ್ನು ಕಡೆಗಣಿಸಿದರೆ ಉಲ್ಬಣವಾದೀತು. ಹಣಕಾಸಿನ ಒತ್ತಡ ಕಾಡಬಹುದು.

ತುಲಾ
ವೃತ್ತಿಯ ಒತ್ತಡವು ನಿಮ್ಮ ಕೌಟುಂಬಿಕ ಬದುಕಿನ ಮೇಲೆ ಪರಿಣಾಮ ಬೀರಬಹುದು. ಎಲ್ಲವನ್ನು ಶಾಂತಚಿತ್ತರಾಗಿ ನಿಭಾಯಿಸಿ.

ವೃಶ್ಚಿಕ
ಸಣ್ಣ ವಿಷಯಕ್ಕೆ ಹೆಚ್ಚು ಚಿಂತೆ ಮಾಡಲು ಹೋಗದಿರಿ. ಆ ಮೂಲಕ ನಿಮ್ಮಲ್ಲೇ ಸಮಸ್ಯೆ ಸೃಷ್ಟಿಸಿಕೊಳ್ಳಬೇಡಿ. ಕುಟಂಬಸ್ಥರ ಜತೆ ಹೆಚ್ಚು ಕಾಲ ಕಳೆಯಿರಿ.

ಧನು
ಇಂದು ವೃತ್ತಿಯ ಒತ್ತಡ ಕಡಿಮೆಯಾಗುವುದು. ಇದರಿಂದ ಮನಸ್ಸಿಗೆ ನಿರಾಳತೆ. ಕೌಟುಂಬಿಕ ವ್ಯವಹಾರಕ್ಕೆ ಹೆಚ್ಚು ಗಮನ ಹರಿಸಲು ಅವಕಾಶ ಸಿಗುವುದು.

ಮಕರ
ಮುಖ್ಯ ವಿಷಯದಲ್ಲಿ ಆತುರದ ತೀರ್ಮಾನ ತೆಗೆದುಕೊಳ್ಳದಿರಿ. ಸಂಗಾತಿ ಜತೆಗೆ ವಾಗ್ವಾದ ನಡೆದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ.

ಕುಂಭ
ದೈಹಿಕ ನೋವಿನಂಥ ಆರೋಗ್ಯ ಸಮಸ್ಯೆ ಉಂಟಾದೀತು. ಅದನ್ನು ನಿರ್ಲಕ್ಷಿಸಬೇಡಿ. ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯಿರಿ. ಅವರಿಗೆ ಸ್ಪಂದಿಸಿರಿ.

ಮೀನ
ವ್ಯಕ್ತಿಗಳ ಕುರಿತಂತೆ ಪೂರ್ವಗ್ರಹ ಬಿಟ್ಟು ವ್ಯವಹರಿಸಿ. ನೀವು ಕಡೆಗಣಿಸಿದವರೇ ನಿಮ್ಮ ನೆರವಿಗೆ ಬಂದಾರು. ಕೌಟುಂಬಿಕ ಬಿಕ್ಕಟ್ಟು ಪರಿಹಾರ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!