ಕಾಗೆಯ ಬದುಕು ಮನುಷ್ಯರಿಗೂ ಆದರ್ಶ, ಇದರ ಕೂಗಿನಲ್ಲಿ ಅಡಗಿದೆ ಮಹಾನ್ ಸಂದೇಶ! 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಗೆ ಕೂಗು ಕರ್ಕಶವಾಗಿರುತ್ತದೆ ಎಂದು ಅವಹೇಳುನ ಮಾಡುವವರಿಗೆ ಅದರ ಹಿಂದಿರುವ ಸಂದೇಶ ತಿಳಿಯದೆ ಹೋಗಿದೆ. ಕಾಗೆಯನ್ನು “ಕಾಲಜ್ಞಾನಿ” ಎಂತಲೂ ಕರೆಯಲಾಗುತ್ತದೆ. ಏಕೆಂದರೆ ಕಾಗೆಗಳು ಪದೇ ಪದೇ ಕೂಗಿದಾಗ, ಸಂಬಂಧಿಕರು ಮನೆಗೆ ಬರುತ್ತಿದ್ದಾರೆ ಅಂತಲೋ..ಪ್ರಕೃತಿ ವಿಕೋಪಗಳು ಸಂಭವಿಸುವ ಮುನ್ನ ಕಾಗೆಗಳು ಸೂಚನೆ ನೀಡುತ್ತವೆ.

ಕಾಗೆಗೆ ಎಲ್ಲಿಯಾದರೂ ಆಹಾರ ಸಿಕ್ಕರೆ ಒಬ್ಬಂಟಿಯಾಗಿ ಹೋಗಿ ತಿನ್ನುವುದಿಲ್ಲ. ಶಬ್ಧ ಮಾಡಿ ತನ್‌ ಸ್ನೇಹಿತರನ್ನೂ ಜೊತೆಗೆ ಕರೆದೊಯ್ಯುವ ಮಹತ್ತರ ಗುಣವಿದೆ. ಇದು ಕಾಗೆಯ ಜೀವನದಿಂದ ಮನುಷ್ಯರೂ ಕಲಿಯಬೇಕಾದ ದೊಡ್ಡ ಗುಣ. ತನ್ನ ಶತ್ರು ಕಂಡೊಡನೆ ಎಲ್ಲ ಕಾಗೆಗಳಿಗೆ ಸಂದೇಶ ರವಾನಿಸಿ ಒಗ್ಗಟ್ಟಿನಿಂದ ಹೋರಾಡುತ್ತವೆ.

ಕಣ್ಣಿಗೆ ಕಾಣದ ಕಾಗೆಗಳ ಮಿಲನ
ಹೆಣ್ಣು ಕಾಗೆ ಗಂಡು ಕಾಗೆಯೊಂದಿಗೆ ಮಿಲನ ಮಾಡುವುದನ್ನು ಯಾರಾದರೂ ನೋಡಿದ್ದೀರಾ..? ಏಕೆಂದರೆ ದೈಹಿಕ ಸಂಪರ್ಕದ ವಿಚಾರದಲ್ಲಿ ಕಾಗೆಗಳು ಬಹಳ ರಹಸ್ಯವಾಗಿರುತ್ತವೆ. ಮಿಲನದ ಸಮಯದಲ್ಲಿ ಗುಬ್ಬಚ್ಚಿಗಳು ಇತರ ಪಕ್ಷಿಗಳನ್ನು ನೋಡಬಹುದು, ಆದರೆ ಕಾಗೆಗಳು ಕಂಡುಬರುವುದಿಲ್ಲ. ಇದು ಕಾಗೆಗಳು ಪಾಲಿಸುವ ನೀತಿ. ಇಂತಹ ಎಲ್ಲಾ ಸೂಕ್ಷ್ಮ ವಿವೇಚನೆಗಳು ಮನುಷ್ಯರಿಗಿಂತ ಕಾಗೆಗಳಯ ಚೆನ್ನಾಗಿ ಪಾಲಿಸುತ್ತವೆ.

ದಯೆ ಪ್ರೀತಿ ಕಲಿಯಲು ಉತ್ತಮ ಗುಣ
ಕಾಗೆಗಳಲ್ಲಿ ಮನುಷ್ಯರೂ ಕಲಿಯಬೇಕಾದ ಇನ್ನೊಂದು ದೊಡ್ಡ ಗುಣವಿದೆ. ಒಂದು ಕಾಗೆ ಸತ್ತರೆ ಕಾಗೆಗಳೆಲ್ಲ ಕೂಡಿಕೊಂಡು ಕಿರುಚುತ್ತವೆ. ಆ ಕಿರುಚಾಟದಲ್ಲಿ ಜೊತೆಗಾರ ಕಾಗೆ ಸಾವಿನ ನೋವಿದೆ. ಮನುಷ್ಯರಂತೆ ಇವು ಕೂಡ ಸ್ನಾನ ಮಾಡಿ ಗೂಡು ತಲುಪುತ್ತವೆ. ಮತ್ತು ಸೂರ್ಯೋದಯಕ್ಕೆ ಮುಂಚಿತವಾಗಿ ಎಚ್ಚರಗೊಂಡು ಮನುಕುಲವನ್ನು ಎಚ್ಚರಿಸುವ ಪ್ರಥಮ ಪಕ್ಷಿ ಈ ಕಾಗೆ.

ಸಮಯ ಪಾಲನೆಯೂ ಇವುಗಳ ಸ್ವತ್ತು
ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ ಮಾಡುವ ಪಕ್ಷಿ ಕಾಗೆ. ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡುವ ಹವ್ಯಾಸವಿದೆ ಎಂದರೆ ಅತಿಶಯೋಕ್ತಿಯಲ್ಲ. ಸೂರ್ಯಗ್ರಹಣದ ಸಮಯದಲ್ಲಿ, ಕಾಗೆಗಳು ಗೂಡಿಗೆ ಸೇರಿ ಗ್ರಹಣವನ್ನು ವೀಕ್ಷಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!