ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಡಿಗೆ ತಾಯ್ನನ ತುಂಬಾನೇ ದುಬಾರಿ ಎಂದು ಈ ಆಯ್ಕೆಯನ್ನು ಕೈ ಬಿಡುತ್ತಿರುವವರು ಈ ಸುದ್ದಿಯನ್ನು ಓದಲೇಬೇಕು..
ಇನ್ಮುಂದೆ ಬಾಡಿಗೆ ತಾಯ್ತನದ ವೆಚ್ಚವನ್ನು ಆರೋಗ್ಯ ವಿಮೆ ಪಾಲಿಸಿಗಳು ಕವಲರ್ ಮಾಡಲಿವೆ. ಆರೋಗ್ಯ ವಿಮಾ ಪಾಲಿಸಿಗಳ ಅಡಿಯಲ್ಲಿ ಬಾಡಿಗೆ ತಾಯ್ತನದ ವೆಚ್ಚ ಭರಿಸುವಂತೆ ಎಲ್ಲಾ ವಿಮಾ ಕಂಪನಿಗಳಿಗೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ದೇಶನ ನೀಡಿದೆ.
ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಇಚ್ಛಿಸುವವರ ಬಾಡಿಗೆ ತಾಯೊಯ ವೈದ್ಯಕೀಯ ವೆಚ್ಚ ಹಾಗೂ ಭವಿಷ್ಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಮೆಯನ್ನು ನೀಡಬೇಕಿದೆ.
36 ತಿಂಗಳ ಅವಧಿಗೆ ಬಾಡಿಗೆ ತಾಯಿಯ ಪರವಾಗಿ ಸಾಮಾನ್ಯ ಆರೋಗ್ಯ ವಿಮಾ ರಕ್ಷಣೆಯನ್ನು ಖರೀದಿ ಮಾಡಬೇಕಿದೆ. ಗರ್ಭಿಣಿಯಾದ ಸಮಯದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಹೆರಿಗೆ ಸಮಯದಲ್ಲಿ ಆಗುವ ತೊಂದರೆಗೆ ವಿಮೆ ನೀಡಲಾಗುತ್ತದೆ.