15 ಲಕ್ಷ ಜನರಿಂದ ಸೂರ್ಯ ನಮಸ್ಕಾರ : ವಿಶ್ವದಾಖಲೆ ನಿರ್ಮಿಸಿದ ಗುಜರಾತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಷದ ಮೊದಲ ದಿನವೇ ಗುಜರಾತ್ ವಿಶ್ವದಾಖಲೆ ಸೃಷ್ಟಿ ಮಾಡಿದೆ. ಹೌದು, ಗುಜರಾತ್‌ನಲ್ಲಿ 15ಲಕ್ಷ ಜನರು ಸೂರ್ಯನಮಸ್ಕಾರದಲ್ಲಿ ಪಾಲ್ಗೊಂಡು ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ರಾಜ್ಯದ 51 ಐತಿಹಾಸಿಕ ಸ್ಥಳದಲ್ಲಿ ಸೂರ್ಯ ನಮಸ್ಕಾರ ಮಾಡಲಾಗಿದೆ. ಇದೇ ಮೊದಲ ಬಾರಿಗೆ 18 ಸಾವಿರ ಗ್ರಾಮಗಳಲ್ಲಿ ಒಟ್ಟಾರೆ 15 ಲಕ್ಷ ಮಂದಿ ಸೂರ್ಯನಮಸ್ಕಾರ ಮಾಡಿದ್ದು, ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.

ಹೊಸ ವರ್ಷದ ಮೊದಲ ದಿನವೇ ದಾಖಲೆ ನಿರ್ಮಿಸಿದ್ದೇವೆ. ಭಾರತದ ಯೋಗ ಪದ್ಧತಿಯಲ್ಲಿ ಸೂರ್ಯ ನಮಸ್ಕಾರಕ್ಕೆ ಸಾಕಷ್ಟು ಪ್ರಾತಿನಿಧ್ಯತೆ ಇದೆ ಎಂದು ಗಿನ್ನಿಸ್ ರೆಕಾರ್ಡ್ ಯೋಗದಲ್ಲಿ ಭಾಗಿಯಾದ ನಂತರ ಸಿಎಂ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!