ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾರುಕಟ್ಟೆಯಲ್ಲಿ 2023ನೇ ಸಾಲಿನಲ್ಲಿ 6,02,111 ಕಾರುಗಳನ್ನು ಮಾರಾಟ ಮಾಡುವ ಮೂಲಕ ತನ್ನ ಅತ್ಯುತ್ತಮ ಸಾಧನೆ ದಾಖಲಿಸಿದೆ ಹುಂಡೈ ಕಾರು ಉತ್ಪಾದಕ ಕಂಪನಿ. 2022ರಲ್ಲಿ ಇದು 5,52,511 ಕಾರುಗಳನ್ನು ಮಾರಿತ್ತು. ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇ. 9ರ ಮಾರಾಟ ಹೆಚ್ಚಳವನ್ನು ಸಾಧಿಸಿದಂತಾಗಿದೆ.
ಒಟ್ಟೂ 13 ಮಾದರಿಗಳಲ್ಲಿ ಕಾರುಗಳನ್ನು ಮಾರಿರುವ ಹುಂಡೈ, ತನ್ನ ರಫ್ತು ಮಾರುಕಟ್ಟೆಯನ್ನು ಸಹ 2022ರ ವರ್ಷಕ್ಕೆ ಹೋಲಿಸಿದರೆ 2023ರಲ್ಲಿ ಶೇ. 10ರಷ್ಟು ಹೆಚ್ಚಿಸಿಕೊಂಡಿದೆ.
ಆದರೆ ಹುಂಡೈ ಕಂಪನಿಯ ಕಾರುಗಳ ಬಗ್ಗೆ ಆಸಕ್ತರಾಗಿರುವ ಗ್ರಾಹಕರಿಗೆ ಈ ವರ್ಷದಲ್ಲಿ ಕಹಿ ಸುದ್ದಿಯಿದೆ. ಉತ್ಪಾದನೆಯ ವೆಚ್ಚ ಹೆಚ್ಚಾಗಿರುವುದರಿಂದ ತನ್ನ ಕಾರುಗಳ ಬೆಲೆಯನ್ನು 2024ರಲ್ಲಿ ಗಣನೀಯವಾಗಿ ಹೆಚ್ಚಿಸುವುದಾಗಿ ಕಂಪನಿ ಹೇಳಿದೆ.