ರಿಯಾ ಚಕ್ರವರ್ತಿಯಿಂದ ಸುಶಾಂತ್ ಗೆ ಡ್ರಗ್ಸ್ ಪೂರೈಕೆ: ಎನ್ ಸಿಬಿ ಚಾಜ್೯ಶೀಟ್ ಉಲ್ಲೇಖ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್ ಪ್ರಕರಣದ ತನಿಖೆ ನಡೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಇಂದು ಮುಂಬೈನ ವಿಶೇಷ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದ್ದು, ಗೆಳತಿ ರಿಯಾ ಚಕ್ರವರ್ತಿ ಸುಶಾಂತ್‌ ಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು ಎಂದು ಆರೋಪ ಹೊರಿಸಿದೆ.
2020 ರ ಜೂನ್ 14 ರಂದು ಸುಶಾಂತ್‌ ಸಿಂಗ್ ರಜಪೂತ್ ಮುಂಬೈನ ಬಾಂದ್ರಾದಲ್ಲಿನ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾದ ಬಳಿಕ ಬಾಲಿವುಡ್ ಚಿತ್ರಜಗತ್ತಿನಲ್ಲಿ ಮಾದಕವಸ್ತು ಸೇವನೆ ಕುರಿತು ಎನ್‌ಸಿಬಿ ತನಿಖೆ ನಡೆಸುತ್ತಿದೆ.

ಸುಶಾಂತ್‌ ಸಿಂಗ್‌ ಅವರಿಗೆ ರಿಯಾ ಚಕ್ರವರ್ತಿ ಹಲವು ಬಾರಿ ಗಾಂಜಾ ಖರೀದಿಸಿ ಪೂರೈಸಿದ್ದಳು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ರಿಯಾ ಚಕ್ರವರ್ತಿ, ಶೋವಿಕ್ ಸೇರಿದಂತೆ 35 ಆರೋಪಿಗಳ ವಿರುದ್ಧ ಎನ್‍ಸಿಬಿ ಆರೋಪಗಳನ್ನು ಹೊರಿಸಿದೆ. ಇವರೆಲ್ಲರೂ ಮಾದಕವಸ್ತುಗಳ ಸೇವನೆ, ಸಂಗ್ರಹ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿ 2020ರಲ್ಲಿ ಬಂಧನಕ್ಕೊಳಗಾಗಿ ಒಂದು ತಿಂಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು. ಈಗ ಎನ್‌ಸಿಬಿ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಆಕೆಯ ಮೇಲೆ ಗಂಭೀರ ಆಪಾದನೆಗಳನ್ನು  ಹೊರಿಸಲಾಗಿದ್ದು, ಆಕೆಗೆ ಸಂಕಷ್ಟ ಎದುರಾಗಿದೆ. ಒಂದುವೇಳೆ ಈ ಆರೋಪಗಳು ಸಾಬೀತಾದಲ್ಲಿ ರಿಯಾಗೆ ಹಲವಾರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here