ಹೊಸದಿಗಂತ ಡಿಜಿಟಲ್ ಡೆಸ್ಕ್
2020 ರಲ್ಲಿ ಮುಂಬೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ಬಾಲಿವುಡ್‍ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಈಗ ಮತ್ತೊಮ್ಮೆ ಕೋಲಾಹಲಕ್ಕೆ ಕಾರಣವಾಗಿದೆ. ಸುಶಾಂತ್ ಸಿಂಗ್‍ರದ್ದು ಆತ್ಮಹತ್ಯೆಯಲ್ಲಿ, ಅದು ಕೊಲೆ ಎಂದು ಶವ ಪರೀಕ್ಷೆ ಮಾಡಿದ್ದ ಶವಾಗಾರದ ಸಿಬ್ಬಂದಿ ಶಾಕಿಂಗ್ ಹೇಳಿಕೆ ನೀಡಿದ್ದು ಸಿನಿಜಗತ್ತಿನಲ್ಲಿ ತಲ್ಲಣ ಸೃಷ್ಟಿಸಿದೆ. ಮುಂಬೈನ ಕೂಪರ್ ಆಸ್ಪತ್ರೆಯ ಶವಾಗಾರ ಸಿಬ್ಬಂದಿ ರೂಪಕುಮಾರ್ ಶಾ ಸ್ಫೋಟಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಈ ಬಗ್ಗೆ ತನಿಖೆಗೆ ಸಿಬಿಐಗೆ ಮನವಿ ಸಲ್ಲಿಸಿದ್ದಾರೆ.
ʼಶವಾಗಾರದಲ್ಲಿ ಪರೀಕ್ಷೆ ವೇಳೆ ಹಾಜರಿದ್ದ ಆಸ್ಪತ್ರೆ ಸಿಬ್ಬಂದಿಯೇ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಹೇಳಿದ್ದಾರೆ. ಈ ಬಗ್ಗೆ ನಾವು ಹಿಂದಿನಿಂದಲೂ ಅನುಮಾನ ವ್ಯಕ್ತಪಡಿಸುತ್ತ ಬಂದಿದ್ದೇವೆ. ಸಹೋದರನ ಸಾವಿನ ಬಗ್ಗೆ ಹೊಸ ಹೇಳಿಕೆಗಳನ್ನು ಪರಿಶೀಲಿಸುವಂತೆ ಕೇಂದ್ರೀಯ ತನಿಖಾ ದಳ(ಸಿಬಿಐ)ವನ್ನು ಒತ್ತಾಯಿಸಿದ್ದಾರೆ. ಈ ಪುರಾವೆಯನ್ನು ಸಿಬಿಐ ಶ್ರದ್ಧೆಯಿಂದ ಪರಿಶೀಲಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ನೀವು ನ್ಯಾಯಯುತ ತನಿಖೆ ನಡೆಸಿ ಸತ್ಯವನ್ನು ನಮಗೆ ತಿಳಿಸುತ್ತೀರಿ ಎಂದು ನಾವು ಯಾವಾಗಲೂ ನಂಬಿದ್ದೇವೆ. ತಮ್ಮನ ಸಾವು ನಮ್ಮ ಹೃದಯ ನೋವಿನಿಂದ ತೋಯಿಸಿದೆ. ಅವನ ಸಾವಿನ ಕಾರಣ ತಿಳಿದು ಕೊಳ್ಳು ನಾವು ಬಯಸುತ್ತೇವೆʼ ಎಂದು ಶ್ವೇತಾ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ