June 26, 2026
Friday, June 26, 2026
spot_img

VIRAL | ಸುಶಿ ಪಾಶಿ ನಂಗೊತ್ತಿಲ್ಲ! ಅನ್ನ-ಸಾಂಬಾರ್‌ ಥರ ಕಲಸಿಕೊಂಡು ತಿಂದ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಪಾನ್‌ನ ಫೇಮಸ್‌ ಸುಶಿ ಬೆಂಗಳೂರಿಗೆ ಕಾಲಿಟ್ಟು ತುಂಬಾ ಸಮಯ ಆಗಿದೆ. ಈಗಿನ ಯೂತ್ಸ್‌ ಜಾಪನೀಸ್‌ ರೆಸ್ಟೋರೆಂಟ್‌ಗಳಿಗೆ ತೆರಳಿ ಸುಶಿ ತಿನ್ನುತ್ತಾರೆ. ಅದರಲ್ಲಿಯೂ ವಿಭಿನ್ನ ರೀತಿಯ ಸುಶಿಗಳು ಕೂಡ ಲಭ್ಯವಿದೆ.

ಸುಶಿಯನ್ನು ತಿನ್ನೋದಕ್ಕೆ ವಿಧಾನ ಇದೆ, ಚಿಕನ್‌, ಫಿಶ್‌, ತರಕಾರಿ ಇನ್ನಿತರ ವಸ್ತುಗಳನ್ನು ಹಾಕಿ ಅನ್ನದಲ್ಲಿ ರೋಲ್‌ ಮಾಡಲಾಗುತ್ತದೆ. ಇದನ್ನು ಇಡಿಯಾಗಿ ಹಾಗೇ ತಿನ್ನಬೇಕು.

ಆದರೆ ಬೆಂಗಳೂರಿನ ಮಹಿಳೆಯೊಬ್ಬರು ಸುಶಿ ಫಸ್ಟ್‌ ಟೈಮ್‌ ಟ್ರೈ ಮಾಡಿದ್ದಾರೆ. ಸುಶಿಯನ್ನು ಸುಶಿಯ ಹಾಗೆ ತಿನ್ನದೇ ಅನ್ನ ಸಾಂಬಾರ್‌ ರೀತಿ ಮಿಕ್ಸ್‌ ಮಾಡಿಕೊಂಡು ತಿಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಬಳಕೆದಾರರೊಬ್ಬರು ಜಪಾನಿಯರು ಇದನ್ನು ನೋಡಿದರೆ ಅವರ ಪ್ರಜ್ಞೆ ತಪ್ಪುವುದು ಗ್ಯಾರಂಟಿ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಕೇವಲ ಪ್ರಚಾರ ಕ್ಕಾಗಿ ಆಹಾರದ ಸ್ವರೂಪವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !