ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಎಲ್ಲೆಡೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಸುದ್ದಿಯಲ್ಲಿದ್ದಾರೆ. ಐಪಿಎಲ್ನ ಮಾಜಿ ಚೇರ್ಮನ್ ಲಲಿತ್ ಮೋದಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಕುರಿತು ಲಲಿತ್ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದಾದ ಬಳಿಕ ಕೆಲವರು ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿಗೆ ಶುಭ ಹಾರೈಸಿದ್ದರೆ, ಅನೇಕ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದರು.
’ಸುಶ್ಮಿತಾ ಸೇನ್ Gold Digger. ದುಡ್ಡಿಗಾಗಿಯೇ ಅವರು ಲಲಿತ್ ಮೋದಿ ಜೊತೆಗೆ ರಿಲೇಶನ್ಶಿಪ್ನಲ್ಲಿದ್ದಾರೆ’ ಅಂತ ನೆಟ್ಟಿಗರು ಕಾಮೆಂಟ್ ಮಾಡತೊಡಗಿದರು. ಇದನ್ನೆಲ್ಲಾ ಗಮನಿಸಿದ ಸುಶ್ಮಿತಾ ಸೇನ್ ಇದೀಗ ಸೋಷಿಯಲ್ ಮೀಡಿಯಾದಲ್ಲೇ ತಮ್ಮದೇ ಶೈಲಿಯಲ್ಲಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.
ಸುಶ್ಮಿತಾ ಸೇನ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್
‘’ನಮ್ಮ ಸುತ್ತಮುತ್ತಲಿನ ಪ್ರಪಂಚವು ಎಷ್ಟು ಶೋಚನೀಯ ಮತ್ತು ಅಸಂತೋಷದಿಂದ ಕೂಡಿದೆ ಎಂಬುದನ್ನು ತಿಳಿದು ನನ್ನ ಹೃದಯ ಛಿದ್ರಗೊಂಡಿದೆ. ಬುದ್ಧಿಜೀವಿಗಳು ಎಂದು ಕರೆಯಲ್ಪಡುವವರು ಚೀಪ್ ಗಾಸಿಪ್ಗಳನ್ನು ಹಬ್ಬಿಸುತ್ತಿದ್ದಾರೆ. ನಾನು ಎಂದಿಗೂ ಭೇಟಿಯಾಗದವರು, ನಾನು ಎಂದಿಗೂ ನೋಡದವರೆಲ್ಲಾ ನನ್ನ ವೈಯಕ್ತಿಕ ಬದುಕಿನ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗೋಲ್ಡ್ ಡಿಗ್ಗರ್ ಅಂತೆಲ್ಲಾ ಹೇಳುತ್ತಿದ್ದಾರೆ.. ಅಯ್ಯೋ.. ಮೇಧಾವಿಗಳೇ..!!!’’
ನಾನು ಚಿನ್ನಕ್ಕಿಂತ ಆಳವಾಗಿ ಅಗೆಯುತ್ತೇನೆ. ನಾನು ಯಾವಾಗಲೂ ವಜ್ರಗಳಿಗೆ ಆದ್ಯತೆ ನೀಡುತ್ತೇನೆ. ಹೌದು.. ವಜ್ರಗಳನ್ನು ನಾನೇ ಖರೀದಿಸುತ್ತೇನೆ…
ನನ್ನ ಹಿತೈಷಿಗಳು, ಪ್ರೀತಿಪಾತ್ರರು ನನಗೆ ನೀಡಿದ ಬೆಂಬಲವನ್ನು ಗೌರವಿಸುತ್ತೇನೆ. ನಾನು ಚೆನ್ನಾಗಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ. ಯಾಕಂದ್ರೆ, ನಾನು ಎಂದಿಗೂ ಎರವಲು ಪಡೆದ ಬೆಳಕಿನಲ್ಲಿ ಚಪ್ಪಾಳೆಗಳನ್ನು ಪಡೆದಿಲ್ಲ. ನಾನು ಸೂರ್ಯ. ಆತ್ಮಸಾಕ್ಷಿ ನನ್ನಲ್ಲಿ ಕೇಂದ್ರೀಕೃತವಾಗಿದೆ .
‘ ನಾನು ಸಂತೋಷ ತುಂಬಿರುವ ಸ್ಥಳದಲ್ಲಿದ್ದೇನೆ. ನಾನು ಮದುವೆಯಾಗಿಲ್ಲ. ನನ್ನ ಬಳಿ ಉಂಗುರಗಳಿಲ್ಲ. ನನ್ನ ಸುತ್ತ ಇರುವುದು ಬೇಷರತ್ತಿನ ಪ್ರೀತಿ. ಆ ಮೂಲಕ ಸ್ಪಷ್ಟೀಕರಣ ನೀಡಿದ್ದೇನೆ. ಈಗ ಜೀವನ ಮತ್ತು ಕೆಲಸಕ್ಕೆ ಹಿಂದಿರುಗುತ್ತೇನೆ. ನನ್ನ ಖುಷಿಯನ್ನ ಯಾವಾಗಲೂ ಹಂಚಿಕೊಳ್ಳುವವರಿಗೆ ಧನ್ಯವಾದಗಳು. ಐ ಲವ್ ಯು ಗಯ್ಸ್; ಎಂದು ಇನ್ಸ್ಟಾಗ್ರಾಮ್ನಲ್ಲಿ ಸುಶ್ಮಿತಾ ಸೇನ್ ಬರೆದುಕೊಂಡಿದ್ದರು.
ತಾರೆಯರ ಮೆಚ್ಚುಗೆ
ಸುಶ್ಮಿತಾ ಸೇನ್ ಅವರ ಈ ಪೋಸ್ಟ್ಗೆ ರಣ್ವೀರ್ ಸಿಂಗ್, ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ, ದಿಯಾ ಮಿರ್ಜಾ, ಸುನೀಲ್ ಶೆಟ್ಟಿ, ಅಥಿಯಾ ಶೆಟ್ಟಿ ಮುಂತಾದ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.