ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಇವರು ಬಿಎಂಟಿಸಿ ಬಸ್ ನಿಲ್ದಾಣವನ್ನೇ ಬ್ಲಾಸ್ಟ್ ಮಾಡಲು ಸಂಚು ಹೂಡಿದ್ದರು ಎನ್ನುವ ಸ್ಫೋಟಕ ಮಾಹಿತಿ ಇದೀಗ ಬಯಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಬ್ಲಾಸ್ಟ್ಗೆ ಎಲ್ಲ ತಯಾರಿ ಮಾಡಿಕೊಂಡಿದ್ದ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಏಳು ಮಂದಿ ಕೃತ್ಯಕ್ಕೆ ಮುಂದಾಗಿದ್ದಾರೆ, ಅದರಲ್ಲಿ ಐವರನ್ನು ಬಂಧಿಸಲಾಗಿದೆ.
ಆರನೇ ಆರೋಪಿಯಾದ ಟಿ.ನಜೀರ್ ಜೈಲಿನಲ್ಲಿ ಇದ್ದುಕೊಂಡೇ ಬ್ಲಾಸ್ಟ್ಗೆ ಮಾಸ್ಟರ್ ಪ್ಲಾನ್ ಮಾಡಿದ್ದಾನೆ, ಉನ್ನು ಏಳನೇ ಆರೋಪಿ ಜುನೇದ್ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಯುತ್ತಿದೆ.
ಬಿಎಂಟಿಸಿ ಬಸ್ಸ್ಟಾಂಡ್ ಅಷ್ಟೇ ಅಲ್ಲ ಇನ್ನಿತರ ಸಾರ್ವಜನಿಕ ಸ್ಥಳಗಳನ್ನು ಇವರು ಟಾರ್ಗೆಟ್ ಮಾಡಿದ್ದರು. ಅರೆಸ್ಟ್ ಆದ ಐವರಲ್ಲಿ ಒಬ್ಬಾತ ಸೂಸೈಡ್ ಬಾಂಬರ್ ಆಗಿದ್ದು, ಆತನಿಗೆ ಉಳಿದವರು ಗ್ರೆನೇಡ್ ಸಪ್ಲೇ ಮಾಡುತ್ತಿದ್ದರು.
4-7 ಸೆಕೆಂಡ್ನಲ್ಲಿ ಬ್ಲಾಸ್ಟ್ ಆಗುವ ಸಾಮರ್ಥ್ಯವಿರುವ ಗ್ರೆನೇಡ್ನ್ನು ಶಂಕಿತ ಉಗ್ರರು ಹೊಂದಿದ್ದಾರೆ. ಹೆಬ್ಬಾಳದ ಡಿಜೆಹಳ್ಳಿ ಬಳಿ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಮುಂದುವರಿದಂತೆ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.