ಹೊಸದಿಗಂತ ಹಾಸನ :
ಪೊದೆಯಲ್ಲಿ ಮಹಿಳೆಯ ಮೃತ ದೇಹ ಅನುಮಾನ ಹುಟ್ಟಿಸುವ ರೀತಿಯಲ್ಲಿ ಬೆಳ್ಳಾವರ ಗ್ರಾಮದಲ್ಲಿ ಪತ್ತೆಯಾಗಿದ್ದು, ಆನೆ ದಾಳಿ ನಡೆಸಿರಬುವುದು ಎಂದು ಶಂಕಿಸಲಾಗಿದೆ.
ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದ ದ್ಯಾವಮ್ಮ (60) ಮೃತಪಟ್ಟಿರುವ ಮಹಿಳೆ. ಘಟನೆ ನಡೆದಿರುವುದು ಸ್ಥಳೀಯ ಗ್ರಾಮ ಬೆಳ್ಳಾವರದಲ್ಲಿ.
ಬೆಳಿಗ್ಗೆ ಜಾನುವಾರುಗಳನ್ನು ಹುಡುಕಲು ತೆರಳಿದ್ದ ದ್ಯಾವಮ್ಮ , ನಂತರ ಮುಳ್ಳಿನ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾಡಾನೆ ದಾಳಿಯಿಂದ ದ್ಯಾವಮ್ಮ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಹಾಗು ಗ್ರಾಮಸ್ಥರು ಆರೋಪ ಮಾಡಿ, ಘಟನೆ ಸ್ಥಳದಲ್ಲೇ ಶವ ಇರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.