ಹೊಸದಿಗಂತ ವರದಿ,ಕೆ.ಆರ್. ಪೇಟೆ :
ಯುವಕನೋರ್ವ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿರುವ ಘಟನೆ ಪಟ್ಟಣದ ಎಚ್.ಡಿ.ಎಫ್.ಸಿ. ಬ್ಯಾಂಕ್ ಬಳಿ ನಡೆದಿದೆ.
ತಾಲೂಕಿನ ನಂದಿಪುರ ಗ್ರಾಮದ ಮಹದೇವು ಎಂಬುವರ ಪುತ್ರ ಪವನ್‌ಕುಮಾರ್ (29) ಎಂಬಾತನೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದವನಾಗಿದ್ದಾನೆ.
ಬ್ಯಾಂಕ್ ಕಾವಲಿಗೆ ಬಂದ ಸೆಕ್ಯೂರಿಟಿ ಯುವಕ ಬೈಕ್ ಬಳಿ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಆತ ಸಾವನ್ನಪ್ಪಿರುವುದು ತಿಳಿದುಬಂತು. ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.
ಪೊಲೀಸರಿಂದ ಸಿಸಿ ಕ್ಯಾಮರಾ ಪರಿಶೀಲನೆ ಬ್ಯಾಂಕ್ ಬಳಿ ಬಂದ ಯುವಕ ಬೈಕ್ ನಿಲ್ಲಿಸಿ ನರಾಳಾಡುತ್ತಾ ಅತ್ತಿತ್ತ ಓಡಾಡಿದ್ದಾನೆ. ಕೆಲ ಸಮಯದ ನಂತರ ಬೈಕ್ ಬಳಿ ಬಿದ್ದವನು ಮೇಲೆದ್ದಿಲ್ಲ. ಇದು ಬ್ಯಾಂಕ್‌ನ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿವೆ ಎಂಬ ಮಾಹಿತಿ ಇದೆ. ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ.