September 30, 2026
Wednesday, September 30, 2026
spot_img

ಹುಬ್ಬಳ್ಳಿಯಲ್ಲಿ ಅನುಮಾನಸ್ಪದ ಓಡಾಟ: ಕಾಶ್ಮೀರ ಮೂಲದ ವ್ಯಕ್ತಿ ಪೊಲೀಸ್ ವಶಕ್ಕೆ

ಹೊಸದಿಗಂತ ವರದಿ,ಹುಬ್ಬಳ್ಳಿ:

ಕಾಶ್ಮೀರ ಮೂಲದ ವ್ಯಕ್ತಿಗಳಿಬ್ಬರು ನಗರದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಹಿನ್ನೆಲೆ ಉಪನಗರ ಪೊಲೀಸರು ಅವರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿರುವ ಗುರುವಾರ ನಡೆದಿದೆ.

ಕಾಶ್ಮೀರ ಮೂಲದ ಮೊಹಮ್ಮದ್ ದೀನ್ ಹಾಗೂ ಗುಲ್ಜಾರ್ ಹುಸೇನ್ ಎಂಬ ವ್ಯಕ್ತಿಗಳು. ನಗರದ ಜನತಾ ಬಜಾರನಲ್ಲಿರುವ ಲಾಡ್ಜ್‌ವೊಂದರಲ್ಲಿ ಇದ್ದರು. ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ. ತಕ್ಷಣ ಉಪನಗರ ಪೊಲೀಸರು ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಆಗ ಅವರ ಬ್ಯಾಗ್‌ನಲ್ಲಿ ತಂಬಾಕು ಹಾಗೂ ಹಣ ಸಿಕ್ಕಿವೆ. ಕಾಶ್ಮೀರ ಮೂಲದ ಇಬ್ಬರು ವ್ಯಕ್ತಿಗಳನ್ನು ಪರಿಶೀಲಿಸಿದ್ದು, ಅವರ ಹತ್ತಿರ ಸೂಕ್ತ ದಾಖಲೆ ಹಾಗೂ ರೈಲ್ವೆ ಟಿಕೆಟ್ ದೊರೆಕಿವೆ. ಭಿಕ್ಷಾಟನೆ ಬಂದಿರುವುದಾಗಿ ತಿಳಿದು ಬಂದಿದೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.

ಅಪ್ರಾಪ್ತ ಬಾಲಕ ಮೇಲೆ ಹಲ್ಲೆ: ಇಲ್ಲಿಯ ಬಾಕಳೆಗಲ್ಲಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನಿಗೆ ಮೂವರು ಹಲ್ಲೆ ನಡೆಸಿರು ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿಯ ತಬೀಬ ಲ್ಯಾಂಡ್ ನ ನಿವಾಸಿ ಯೋಗೀಶ ದಿಕ್ಷಿತ ಎಂಬಾತ ಹಲ್ಲೆಗೊಳಗಾದ ಬಾಲಕ. ಮೂವರು ಅನ್ಯಕೋಮಿನ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಾಲಕ ಯೋಗೀಶ ಸೈಕಲ್ ತೆಗೆದುಕೊಂಡು ಹೋಗುವಾಗ ಎದುರಿಗೆ ಬಂದ ಮೂವರು ಬಾಲಕರು ಅವನಿಗೆ ಅವಾಚ್ಯವಾಗಿ ನಿಂದಿಸಿ, ಬಳಿಕ ಪೈಬರ್ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ಬಾಲಕ ಪಾಲಕರು ಈ ಕುರಿತು ದೂರು ನೀಡಿದ್ದರು. ಕಾನೂನು ಸಂಘರ್ಷಕ್ಕೆ ಒಳಪಟ್ಟಿರುವ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Must Read