ಹೊಸದಿಗಂತ ವರದಿ,ಕಲಬುರಗಿ:
ಮಹಾತ್ಮ ಗಾಂಧೀಜಿಯವರ ೧೫೪ನೇ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಜೀ ಅವರು ಕರೆಕೊಟ್ಟ ಸ್ವಚ್ಛತಾ ಹಿ ಸೇವಾ ಅಭಿಯಾನದ ನಿಮಿತ್ತವಾಗಿ ಕಲಬುರಗಿ ನಗರದ ಟೌನ್ ಹಾಲ್ ಹತ್ತಿರವಿರುವ ಗಾಂಧಿಜಿ ಪ್ರತಿಮೆ ಆವರಣ ಮತ್ತು ಗಾಂಧಿಜಿ ಪ್ರತಿಮೆಯನ್ನು ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಕಲಬುರಗಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರೊಂದಿಗೆ ಸ್ವಚ್ಛಗೊಳಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರೀತಮ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಕಾರ್ಯದರ್ಶಿಗಳಾದ ಗೋಪಾಲ್ ಕೃಷ್ಣ ಸರಡಗಿ, ರಾಹುಲ್ ಬಬಲಾದ ಇದ್ದರು.