Thursday, March 30, 2023

Latest Posts

ಬೇಲ್‌ ಮೇಲೆ ಹೊರಬಂದ ಬೆನ್ನಲ್ಲೇ ಕ್ರಿಕೆ​ಟಿಗ ಪೃಥ್ವಿ ಶಾ ವಿರುದ್ಧವೇ ದೂರುಕೊಟ್ಟ ಸ್ವಪ್ನ ಗಿಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆ​ಟಿಗ ಪೃಥ್ವಿ ಶಾ ಹಾಗೂ ಸ್ನೇಹಿತನ ಕಾರಿ​ನ ಮೇಲೆದಾಳಿ ನಡೆ​ಸಿ, ಅವ​ರನ್ನು ತಳ್ಳಾ​ಡಿ​ದ ಘಟನೆಗೆ ಇದೀಗ ಮತ್ತೊಂದು ತಿರುವು ಸಿಕ್ಕಿದ್ದು, ಶಾ ವಿರುದ್ದ ಸ್ವಪ್ನ ಗಿಲ್ ದೂರು ದಾಖಲಿಸಿದ್ದಾರೆ.

ಮುಂಬೈ ನ ಖಾಸಗಿ ಹೋಟೆಲ್‌ನಲ್ಲಿ ಸ್ವಪ್ನ ಗಿಲ್ ಮತ್ತು ಸ್ನೇಹಿತರು ಹಾಗೂ ಪೃಥ್ವಿ ಶಾ ನಡುವೆ ಸೆಲ್ಫಿ ವಿಚಾರವಾಗಿ ನಡೆದಿದ್ದ ಗಲಾಟೆಯ ಸಂಬಂಧ 8 ಜನರನ್ನು ಓಷಿವಾರ ಪೊಲೀಸರು ಬಂಧಿಸಿದ್ದರು. ಇದೀಗ ಈ ಎಲ್ಲರಿಗೂ ಸದ್ಯ ನ್ಯಾಯಾಲಯ ಜಾಮೀನು ನೀಡಿದೆ. ಬೇಲ್‌ ಮೇಲೆ ಹೊರಬಂದಿರುವ ಸ್ವಪ್ನ ಗಿಲ್‌, ಪೃಥ್ವಿ ಶಾ ವಿರುದ್ದವೇ ದೂರು ದಾಖಲಿಸಿದ್ದಾರೆ.

ಪೃಥ್ವಿ ಶಾ ಕಾರಿನ ಗಾಜು ಒಡೆಯಲು ಆತನೇ ಕಾರಣ. ಆತನ ಪ್ರಚೋದನೆಯಿಂದಲೇ ಈ ಘಟನೆ ಸಂಭವಿಸಿದೆ. ನನ್ನ ಗೆಳತಿ, ಪೃಥ್ವಿ ಶಾ ಬಳಿ ಸೆಲ್ಪಿ ಕೇಳಿದ್ದಳು. ಆದರೆ ಇದಕ್ಕೆ ನಿರಾಕರಣೆ ಮಾಡಿದ್ದಲ್ಲದೇ ಆಕೆಯ ಫೋನನ್ನು ಎಸೆದರು. ಈ ಘಟನೆಯ ಸಂದರ್ಭದಲ್ಲಿ ಪೃಥ್ವಿ ಶಾ ಹಾಗೂ ಆತನ ಗೆಳೆಯ ಪಾನಮತ್ತರಾಗಿದ್ದರು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!