ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಭಾಗವಹಿಸಿದ್ದರು. ಸದ್ಯ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಯಾತ್ರೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರನಟಿ ಸ್ವರಾ ಭಾಸ್ಕರ್ ಕೂಡ ಗುರುವಾರ ಬೆಳಗ್ಗೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಕೂಡ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ ಸೆ.7ರಂದು ಆರಂಭವಾದ ಈ ಯಾತ್ರೆ 83ನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೆ 7 ರಾಜ್ಯಗಳ 36 ಜಿಲ್ಲೆಗಳಲ್ಲಿ ಯಾತ್ರೆ ಪೂರ್ಣಗೊಂಡಿದೆ. ರಾಹುಲ್ ಇನ್ನೂ 1,209 ಕಿ.ಮೀ ನಡೆಯಬೇಕಿದೆ. ರಾಹುಲ್ ಕೈಗೊಂಡಿರುವ ಈ ಯಾತ್ರೆಯಲ್ಲಿ ಹಲವು ಸಿನಿಮಾ ತಾರೆಯರು, ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಭಾಗವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಹುಲ್ ಅವರ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಕೂಡ ಭಾಗವಹಿಸಿದ್ದರು. ಪಕ್ಷವು 12 ರಾಜ್ಯಗಳಲ್ಲಿ 3,750 ಕಿಲೋಮೀಟರ್‌ಗಳನ್ನು ಕ್ರಮಿಸಲು ಯೋಜಿಸಿದೆ.
Bollywood Actress @ReallySwara joins Sh. @RahulGandhi in #BharatJodoYatra at Ujjain, Madhya Pradesh. pic.twitter.com/xe7EM6tO7D
— Nitin Agarwal (@nitinagarwalINC) December 1, 2022