SWEET | ಕೇಸರಿಬಾತ್ ತಿಂದೇ ಇರ್ತೀರಾ, ಆದ್ರೆ ಕಲ್ಲಂಗಡಿ ಫ್ಲೇವರ್ ಕೇಸರಿಬಾತ್ ಟ್ರೈ ಮಾಡಿದ್ದೀರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲ್ಲಂಗಡಿ ಹಣ್ಣಿನ ಜ್ಯೂಸು ಹಾಗೂ ಐಸ್ ಕ್ರೀಮ್ ಅಥವಾ ಕೇವಲ ಹಣ್ಣನ್ನು ತಿಂದೇ ಇರುತ್ತೇವೆ ಆದ್ರೆ ಯಾವತ್ತಾದರೂ ಈ ಕಲ್ಲಂಗಡಿ ಹಣ್ಣಿನಲ್ಲಿ ಕೇಸರಿಬಾತ್ ಟ್ರೈ ಮಾಡಿದ್ದೀರಾ? ಅಯೋ ಈ ಹಣ್ಣಿನಲ್ಲಿ ಹೇಗಪ್ಪಾ ಕೇಸರಿಬಾತ್ ಮಾಡಿ ತಿನ್ನೋದು ಅಂತ ಯೋಚ್ನೆ ಮಾಡ್ತಿದ್ರೆ ಒಮ್ಮೆ ಈ ರೆಸಿಪಿನ ಟ್ರೈ ಮಾಡಿ ನೋಡಿ ಆಮೇಲೆ ನೀವೇ ಇಷ್ಟಪಡ್ತಿರಾ.

Rava Kesari Recipe How To Make Rava Kesari Recipe – Salt

ಬೇಕಾಗುವ ಸಾಮಗ್ರಿಗಳು

ಹುರಿದ ರವಾ- 1/2 ಕಪ್
ಕಲ್ಲಂಗಡಿ ಹಣ್ಣಿನ ರಸ- 1 1/2 ಕಪ್
ಬೆಲ್ಲ- 3/4 ಕಪ್
ಗೋಡಂಬಿ- ದ್ರಾಕ್ಷಿ ಸ್ವಲ್ಪ
ತುಪ್ಪ- 2 ಚಮಚ

Rava Kesari - Aarti Madan

ಕಲ್ಲಂಗಡಿ ಕೇಸರಿಬಾತ್ ಮಾಡುವ ವಿಧಾನ

ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಗೋಡಂಬಿ ದ್ರಾಕ್ಷಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದಾದ ಬಳಿಕ ಬಾಣಲೆಗೆ ಕಲ್ಲಂಗಡಿ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಬಿಸಿ ಮಾಡಿ. ಅದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಚೆನ್ನಾಗಿ ಕರಗಿದ ನಂತರ ಕಲ್ಲಂಗಡಿ ರಸವನ್ನು 5 ನಿಮಿಷ ಕುದಿಸಿ, ನಂತರ ಇದಕ್ಕೆ ಹುರಿದ ರವೆಯನ್ನು ಸೇರಿಸಿ ಗಂಟುಗಳು ಬೀಳದ ಹಾಗೆ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯದಾಗಿ ಇದಕ್ಕೆ ಕೇಸರಿ ಬಣ್ಣದ ಪುಡಿ ಅಥವಾ ಹರಶಿನ ಪುಡಿ ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಬೆಂದ ನಂತರ ಕಡೆಯಲ್ಲಿ ಇದಕ್ಕೆ ಹುರಿದ ಗೋಡಂಬಿ ಮತ್ತು ದ್ರಾಕ್ಷಿಯನ್ನು ಸೇರಿಸಿ, ಅಲಂಕರಿಸಿ ಮತ್ತು ಬಿಸಿಯಾದ, ರುಚಿಯಾದ ಕಲ್ಲಂಗಡಿ ಕೇಸರಿಬಾತ್ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!