ಶಬರಿಮಲೆ ಯಾತ್ರೆ ಮಾಡುವ ಅಯ್ಯಪ್ಪ ಭಕ್ತರಿಗೆ ಸಿಹಿ ಸುದ್ದಿ: ಬೆಂಗಳೂರಿನಿಂದ ವೋಲ್ವೋ ಬಸ್ ಸೇವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಿಂದ ಶಬರಿಮಲೆ ಯಾತ್ರೆ ಕೈಗೊಳ್ಳುವ ಅಯ್ಯಪ್ಪ ಭಕ್ತರಿಗೆ ಕೆಎಸ್​ಆರ್​ಟಿಸಿ ಹೊಸದಾಗಿ ವೋಲ್ವೋ ಬಸ್ ಸೇವೆ ಆರಂಭಿಸಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ನವೆಂಬರ್ 29ರಿಂದ ಹೊಸ ವೋಲ್ವೋ ಬಸ್ ಸಂಚಾರ ಆರಂಭವಾಗಲಿದ್ದು, ಬೆಂಗಳೂರಿನಿಂದ-ನೀಲಕ್ಕಲ್ (ಪಂಪಾ-ಶಬರಿಮಲೈ) ವರೆಗೆ ಓಡಾಟ ನಡೆಸಲಿದೆ ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ.

ನವೆಂಬರ್ 29 ರಿಂದ ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೈ) ಮಾರ್ಗದಲ್ಲಿ ವೋಲ್ವೋ ಬಸ್ ಸೇವೆ ಆರಂಭವಾಗಲಿದೆ. ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಬಸ್ ಹೊರಟು, ಮರುದಿನ ಬೆಳಗ್ಗೆ 6.45ಕ್ಕೆ ನೀಲಕ್ಕಲ್ ತಲುಪುತ್ತದೆ. ನೀಲಕ್ಕಲ್‌ನಿಂದ ಸಂಜೆ 6 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ. ಇನ್ನು ಪ್ರಯಾಣ ದರ ವಯಸ್ಕರಿಗೆ 1,750 ರೂ. ನಿಗದಿಪಡಿಸಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!