ಭಾರತೀಯರಿಗೆ ಸಿಹಿ ಸುದ್ದಿ: ವಲಸಿಗರ ಕೆಲಸದ ವೀಸಾ ಕಾಲಾವಧಿಯನ್ನು ವಿಸ್ತರಿಸಿದ ಅಮೆರಿಕ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕ ಸರ್ಕಾರವು ವಲಸಿಗರ ವೀಸಾದ ಕಾಲಾವಧಿಯನ್ನು ವಿಸ್ತರಿಸಿದೆ. ಈ ಮೂಲಕ ಗ್ರೀನ್ ಕಾರ್ಡ್‌ಗಳನ್ನು ಬಯಸುವವರು ಮತ್ತು ಪತಿ-ಪತ್ನಿಯ ಎಚ್​​-1ಬಿ ವೀಸಾ ಸೇರಿ ಕೆಲ ವಲಸಿಗರಿಗೆ ಕೆಲಸದ ಪರವಾನಗಿಯನ್ನು ಹೆಚ್ಚುವರಿ 18 ತಿಂಗಳವರೆಗೆ ಬಳಸಲು ಅನುಮತಿಸಲಾಗಿದೆ. ಇದರಿಂದ ಅಮೆರಿಕದಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರಿಗೆ ಅನುಕೂಲವಾಗಿದೆ.
ಜೋ ಬೈಡನ್ ಸರ್ಕಾರದ ಈ ಘೋಷಣೆಯ ಇಂದಿನಿಂದಲೇ (ಮೇ 4) ಜಾರಿಗೆ ಬಂದಿದೆ. ಹೆಚ್ಚುವರಿ 180 ದಿನಗಳೊಂದಿಗೆ ಈ ಕಾರ್ಡ್​​ಗಳ ಅವಧಿ 540 ದಿನಗಳಿಗೆ ಸ್ವಯಂಪ್ರೇರಿತವಾಗಿ ವಿಸ್ತರಣೆಯಾಗಲಿದೆ ಎಂದು ಗೃಹ ಭದ್ರತೆ ಇಲಾಖೆ ಹೇಳಿದೆ.
ಅಮೆರಿಕದ ಈ ಕ್ರಮದಿಂದ ಸುಮಾರು 87,000 ವಲಸಿಗರಿಗೆ ತಕ್ಷಣಕ್ಕೆ ಅನುಕೂಲವಾಗಿದೆ. 30 ದಿನಗಳಲ್ಲಿ ಕಾರ್ಡ್​​​ ಅವಧಿ ಮುಗಿಯುವುದು ತಪ್ಪಲಿದೆ. ಅಲ್ಲದೇ, ಒಟ್ಟಾರೆಯಾಗಿ 4.20 ಲಕ್ಷ ಜನರಿಗೆ ಇದರಿಂದ ಸಹಾಯವಾಗಲಿದೆ.
ಗ್ರೀನ್ ಕಾರ್ಡ್ ಅಂದರೆ ಅಧಿಕೃತವಾಗಿ ಅನುಮತಿ ವಾಸದ ಕಾರ್ಡ್​​ ಎಂದೇ ಕರೆಯಲ್ಪಡುತ್ತದೆ. ಇದು ವಲಸಿಗರಿಗೆ ನೀಡಲಾದ ದಾಖಲೆಯಾಗಿದ್ದು, ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸುವ ಸವಲತ್ತು ನೀಡಲಾಗಿದೆ ಎಂಬುದಕ್ಕೆ ಇದು ಒಂದು ಸಾಕ್ಷಿ ಅಥವಾ ದಾಖಲೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!