ಟ್ವಿಟರ್ ಬಳಕೆದಾರರಿಗೆ ಸಿಹಿ ಸುದ್ದಿ: ‘ಟ್ವೀಟ್ ಎಡಿಟ್’ ಬಟನ್ ಸೇರಿಸಿದ ಸಂಸ್ಥೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟ್ವಿಟರ್‌ ಗಳನ್ನು ಎಡಿಟ್ ಮಾಡಲು ಟ್ವಿಟರ್ ಒಂದು ವೈಶಿಷ್ಟ್ಯವನ್ನು ಸೇರಿಸಿದೆ. ಮುಂಬರುವ ವಾರಗಳಲ್ಲಿ ಟ್ವಿಟರ್ ಬ್ಲೂ ಚಂದಾದಾರರಿಗಾಗಿ ಎಡಿಟ್ ಬಟನ್ ಅನ್ನು ಹೊರತರಲಾಗುವುದು ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಘೋಷಿಸಿದೆ.

ಈ ಹಿಂದೆ ಒಮ್ಮೆ ಟ್ವೀಟ್ ಮಾಡಿದ ವಿಷಯವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಆದರೆ ಈಗ ಟ್ವಿಟ್‌ಗಳನ್ನು ಎಡಿ ಮಾಡಬಹುದಾಗಿದೆ.
ಎಡಿಟ್ ಬಟನ್ ಬಳಕೆದಾರರಿಗೆ ಪ್ರಕಟಿಸಿದ ನಂತರ 30 ನಿಮಿಷಗಳವರೆಗೆ ಅಸ್ತಿತ್ವದಲ್ಲಿರುವ ಟ್ವೀಟ್ ಗಳಲ್ಲಿ ಬದಲಾವಣೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಪ್ರಕಟಿತ ಟ್ವೀಟ್ ಲೇಬಲ್, ಟೈಮ್ ಸ್ಟ್ಯಾಂಪ್ ಮತ್ತು ಟ್ವೀಟ್ ಅನ್ನು ಎಡಿಟ್ ಮಾಡಲಾಗಿದೆ ಎಂದು ಸೂಚಿಸುವ ಐಕಾನ್ ನಂತಹ ಗುರುತಿಸುವಿಕೆಗಳನ್ನು ಹೊಂದಿರುತ್ತದೆ.

ಟ್ವಿಟರ್ ಬಳಕೆದಾರರು ಟ್ವೀಟ್ ಅನ್ನು ಕ್ಲಿಕ್ ಮಾಡಲು ಮತ್ತು ಮೂಲ ವಿಷಯಕ್ಕೆ ಮಾಡಿದ ಎಲ್ಲಾ ಬದಲಾವಣೆಗಳನ್ನು ನೋಡಲು ಸಾಧ್ಯವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!