ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಹಬ್ಬಕ್ಕಾಗಲೀ ಬಗೆ ಬಗೆಯ ಭಕ್ಷ್ಯಗಳನ್ನು ಮಾಡುತ್ತೇವೆ. ರುಚಿ ರುಚಿಯಾದ ಭಕ್ಷ್ಯಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಅದರಲ್ಲಿ ಅತಿರಸವೂ ಒಂದು ಸಿಹಿ ಭಕ್ಷ್ಯ. ಇದು ನಿಮ್ಮ ರೆಸಿಪಿಯಲ್ಲಿರಲಿ.
ಬೇಕಾಗುವ ಸಾಮಾಗ್ರಿ: ಐದು ಲೋಟೆ ತಿಂಡಿ ಅಕ್ಕಿ, 2 ಕಪ್ ಬೆಲ್ಲ, 4-5 ಟೀಸ್ಪೂನ್ ತುಪ್ಪ ಅಥವಾ ತೆಂಗಿನ ಎಣ್ಣೆ, ಸ್ವಲ್ಪ ಏಲಕ್ಕಿ, ಕರಿಯಲು ಎಣ್ಣೆ.
ಮಾಡುವ ವಿಧಾನ:
ಅತಿರಸ ಅಥವಾ ಅಥ್ರಸ ಅಥವಾ ಕಜ್ಜಾಯ ಎಂದು ಕರೆಯುವ ಈ ತಿಂಡಿಯನ್ನು ಮಾಡುವಾಗ ಕೆಲವೊಂದು ಅಂಶಗಳನ್ನು ತಪ್ಪದೇ ಪಾಲಿಸಬೇಕಾಗುತ್ತದೆ. ತಿಂಡಿ ಅಕ್ಕಿಯನ್ನು (ಬೆಳ್ತಿಗೆ ಅಕ್ಕಿ/ದೋಸೆ ಅಕ್ಕಿ)
ಅಕ್ಕಿಯನ್ನು ತೊಳೆದು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ನಂತರ ಚೆನ್ನಾಗಿ ತೊಳೆದು ಶುಭ್ರವಾದ ಬಟ್ಟೆಯಲ್ಲಿ ಹದಿನೈದು ನಿಮಿಷಗಳ ಕಾಲ ಹರವಿಡಿ. ಅಕ್ಕಿ ಪೂರ್ಣ ಒಣಗದಂತೆ ನೋಡಿಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಹಾಕಿ ರುಬ್ಬಿ. ರುಬ್ಬುವಾಗ ಏಲಕ್ಕಿ ಸೇರಿಸಿಕೊಳ್ಳಿ. ಹದ ನುಣ್ಣಗೆ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ.
ಬಾಣಲೆಯನ್ನು ಒಲೆಯ ಮೇಲಿಟ್ಟು ಒಂದು ಲೋಟ ನೀರು ಸೇರಿಸಿ ಬೆಲ್ಲ ಹಾಕಿ ಕುದಿಯಲು ಇಡಿ. ಬೆಲ್ಲ ನಾರು ಪಾಕವಾಗುತ್ತಿದ್ದಂತೆಯೇ ರುಬ್ಬಿದ ಅಕ್ಕಿ ಹಿಟ್ಟನ್ನು ಸೇರಿಸಿ ಸರಿಯಾಗಿ ಮಿಶ್ರಮಾಡಿ. ದಪ್ಪ ಪೇಸ್ಟ್ ಆಗುವ ತನಕ ಗೊಟಾಯಿಸಿಕೊಳ್ಳಿ.
ಬಾಳೆ ಎಲೆಗೆ ತೆಂಗಿನೆಣ್ಣೆ ಸವರಿಕೊಳ್ಳಿ. ನಂತರ ಮಿಶ್ರಣವನ್ನು ಸಣ್ಣ ಗಾತ್ರದ ಉಂಡೆ ಮಾಡಿ ಒಡೆಯಂತೆ ತಟ್ಟಿ ಬಾಣೆಯಲ್ಲಿ ಎಣ್ಣೆ ಬಿಸಿಮಾಡಿ ಕರಿಯಿರಿ. ಕಂದು ಬಣ್ಣಕ್ಕೆ ತಿರುಗುವ ತನಕ ಕರಿಯಿರಿ. ರುಚಿ ರುಚಿಯಾದ ಅತಿರಸ ಸಿದ್ದವಾಯಿತು.