Saturday, December 9, 2023

Latest Posts

ಸೈಯದ್​ ಮೋದಿ ಇಂಟರ್​ನ್ಯಾಷನಲ್: ಫೈನಲ್ ಗೆ ಲಗ್ಗೆ ಇಟ್ಟ ಮಾಳವಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೈಯದ್​ ಮೋದಿ ಇಂಟರ್​ನ್ಯಾಷನಲ್ ಸೆಮಿಫೈನಲ್ಸ್​ನಲ್ಲಿ ಭಾರತದ ಮಾಳವಿಕ ಬನ್ಸೋಡ್​ ಭಾರತದವರೇ ಆದ ಅನುಪಮ ಉಪಾಧ್ಯಾಯ ವಿರುದ್ಧ ರೋಚಕ ಹೋರಾಟದಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.
ಈ ಪಂದ್ಯದಲ್ಲಿ ಮಾಳವಿಕ 19-21, 21-19,21-7 ಗೇಮ್​ಗಳ ಅಂತರದಲ್ಲಿ ಗೆಲುವು ಸಾಧಿಸಿದರು.
ಮಾಳವಿಕ ಬನ್ಸೋಡ್​ ಫೈನಲ್​ನಲ್ಲಿ 2 ಬಾರಿಯ ಒಲಿಂಪಿಕ್ ಪದಕ ವಿಜೇತ ಹಾಗೂ ಮಾಜಿ ವಿಶ್ವ ಚಾಂಪಿಯನ್​ ಪಿವಿ ಸಿಂಧು ಅಥವಾ ರಷ್ಯಾದ ಇವ್ಗೇನಿಯಾ ಕೊಸ್ಟೆತ್ಸ್ಕಾಯಾ ವಿರುದ್ಧ ಸೆಣಸಾಡಲಿದ್ದಾರೆ.
ಪುರುಷರ ವಿಭಾಗದ ಸಿಂಗಲ್ಸ್​ನಲ್ಲಿ ಏಕೈಕ ಭರವಸೆಯಾಗಿದ್ದ ಭಾರತದ ಮಿಥುನ್ ಮಂಜುನಾಥ್​ ಸೆಮಿಫೈನಲ್ಸ್​ನಲ್ಲಿ ಫ್ರಾನ್ಸ್​ನ ಅರ್ನಾಡ್ ಮರ್ಕಲ್ ವಿರುದ್ಧ 3 ಸೆಟ್​ಗಳ ರೋಚಕ ಪಂದ್ಯದಲ್ಲಿ ಸೋಲು ಕಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!