Saturday, September 23, 2023

Latest Posts

ರಂಗೇರುತ್ತಿದೆ ಉತ್ತರ ಪ್ರದೇಶ ಚುನಾವಣಾ ಕಣ: ಮನೆ ಮನೆ ಪ್ರಚಾರ ನಡೆಸಿದ ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶ ಚುನಾವಣೆ ಕಣ ರಂಗೇರುತ್ತಿದ್ದು, ರಾಜಿಕೀಯ ಪಕ್ಷಗಳು ಅಖಾಡಕ್ಕೆ ಇಳಿದಿವೆ . ಈಗಾಗಲೇ ಚುನಾವಣಾ ಆಯೋಗ ಸಾರ್ವಜನಿಕ ಪ್ರಚಾರ ಸಭೆ ನಡೆಸದಂತೆ ನಿರ್ಬಂಧ ಹೇರಿದ್ದು, ಹೀಗಾಗಿ ರಾಜಕೀಯ ಪಕ್ಷಗಳು ಮನೆ ಮನೆ ಪ್ರಚಾರ ನಡೆಸುವ ಮೂಲಕ ಗೆಲುವಿಗೆ ಹರಸಾಹಸ ಪಡುತ್ತಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಂದು ಬಾರಿ ಗೆಲುವಿನ ಲೆಕ್ಕಾಚಾರದಲ್ಲಿದ್ದು, ಮನೆ ಮನೆ ಪ್ರಚಾರ ಆರಂಭಿಸಿದೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈರಾನಾ ಪ್ರದೇಶದಲ್ಲಿ ಪ್ರಚಾರ ಅಭಿಯಾನ ಆರಂಭಿಸಿದ್ದಾರೆ.
ಫೆ. 10ರಿಂದ ಉತ್ತರ ಪ್ರದೇಶದಲ್ಲಿ ಮತದಾನ ನಡೆಯಲಿದ್ದು, ಒಟ್ಟು 403 ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್​ 10ರಂದು ಫಲಿತಾಂಶ ಹೊರಬರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!