Tuesday, May 30, 2023

Latest Posts

ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಸಂಗ್ರಹಿಸಿಟ್ಟಿದ್ದ ಟಿ-ಶರ್ಟ್‌‌, ಗೋಡೆ ಗಡಿಯಾರಗಳು ಜಪ್ತಿ

ಹೊಸದಿಗಂತ ವರದಿ ವಿಜಯಪುರ:

ಜಿಲ್ಲೆಯ ಮುದ್ದೇಬಿಹಾಳ‌ ತಾಲೂಕಿನ ಯರಗಲ್ ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ ಪೊಲೀಸರು ದಾಳಿ ನಡೆಸಿ, ಪರವಾನಗಿ ಇಲ್ಲದೆ ಸಂಗ್ರಹಿಸಿ ಇಟ್ಟಿದ್ದ ಟಿ-ಶರ್ಟ್‌‌ ಹಾಗೂ ಗೋಡೆ ಗಡಿಯಾರಗಳನ್ನು ಜಪ್ತಿ ಮಾಡಿದ್ದಾರೆ.

ಮುದ್ದೇಬಿಹಾಳ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲಿನ ಸಕ್ಕರೆ ಕಾರ್ಖಾನೆ ಗೋದಾಮಿಗೆ ಸೋಮವಾರ ರಾತ್ರಿ ದಾಳಿ ನಡೆಸಿದ್ದ ವೇಳೆ, ಅಪಾರ ಪ್ರಮಾಣದಲ್ಲಿ ಟಿ- ಶರ್ಟ್ ಹಾಗೂ ಗೋಡೆ ಗಡಿಯಾರಗಳು ಪತ್ತೆಯಾಗಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಆರ್. ಪಾಟೀಲ ಅವರ ಭಾವಚಿತ್ರ ಹೊಂದಿರುವ ಗೋಡೆ ಗಡಿಯಾರ ಹಾಗೂ ಎಸ್ ಆರ್ ಪಿ ಗುರುತಿರುವ ಟಿ- ಶರ್ಟ್ ಗಳು ಸಂಗ್ರಹಿಸಿರುವುದು ಕಂಡು ಬಂದಿವೆ.

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!