ಸದ್ದಿಲ್ಲದೇ ಏರುತ್ತಿದೆ XBB 1.16 ರೂಪಾಂತರ, ದೇಶಾದ್ಯಂತ 610 ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಹೊಡೆತಕ್ಕೆ ತತ್ತರಿಸಿರುವ ಭಾರತಕ್ಕೆ ಇದೀಗ ಹೊಸ ರೂಪಾಂತರ ಬಿಡದಂತೆ ಕಾಡುತ್ತಿದೆ.

ದೇಶಾದ್ಯಂತ ಕೋವಿಡ್‌ನ ಎಕ್ಸ್‌ಬಿಬಿ 1.16 ರೂಪಾಂತರದ ಒಟ್ಟು 610 ಪ್ರಕರಣಗಳು ದಾಖಲಾಗಿದ್ದು, ಸದ್ದಿಲ್ಲದೇ ಪ್ರಕರಣಗಳು ಏರಿಕೆಯಾಗುತ್ತಿವೆ.

ಇತ್ತೀಚೆಗೆ ಏಕಾಏಕಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದಕ್ಕೆ ಈ ರೂಪಾಂತರ ಕಾರಣವಾಗಿರಬಹುದು ಎಂದು ಭಾರತೀಯ ಸಾರ್ಸ್ ಕೋವ್ 2 ಜೀನೋಮಿಕ್ಸ್ ಕನ್ಸೋರ್ಟಿಯಂ ಐಎನ್‌ಎಸ್‌ಎಸಿಒಜಿ ಡೇಟಾ ಹೇಳಿದೆ.

11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿಯೂ ಈ ರೂಪಾಂತರ ಕಂಡುಬಂದಿದ್ದು, ಜನರಲ್ಲಿ ಮತ್ತೆ ಆತಂಕ ಎದುರಾಗಿದೆ.

ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ತಲಾ 164, ತೆಲಂಗಾಣದಲ್ಲಿ 93 ಹಾಗೂ ಕರ್ನಾಟಕದಲ್ಲಿ 86 ರೂಪಾಂತರ ಪ್ರಕರಣಗಳು ಪತ್ತೆಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!