ಟಿ20: ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿದೆ. ಈಗಾಗಲೆ 2-0ಯಲ್ಲಿ ಸರಣಿ ತನ್ನದಾಗಿಸಿಕೊಂಡಿರುವ ಭಾರತ ತಂಡದಲ್ಲಿ ನಾಲ್ವರು ಆಟಗಾರರನ್ನು ಬದಲಾವಣೆ ಮಾಡಲಾಗಿದೆ.
ಕುಲ್ದೀಪ್ ಯಾದವ್​, ರವಿ ಬಿಸ್ಣೋಯ್, ಆವೇಶ್ ಖಾನ್ ಮತ್ತು ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲಿ ತಂಡ ಸೇರಿಕೊಂಡರೆ, ಬುಮ್ರಾ, ಭುವನೇಶ್ವರ್ ಕುಮಾರ್​, ಚಹಲ್ ಮತ್ತು ಇಶಾನ್ ಕಿಶನ್​ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಆರು ಓವರ್ ಮುಗಿದಾಗ ಶ್ರೀಲಂಕಾ 3 ವಿಕೆಟ್ ಕೆಳೆದುಕೊಂಡು 22 ರನ್ ಗಳಿಸಿದೆ. ಆವೇಶ್ ಖಾನ್ 2 ಮತ್ತು ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!