ಕೊರೋನಾ ಸೋಂಕು ತಗುಲಿದ್ದರೂ ಟಿ20 ವಿಶ್ವಕಪ್ ಆಡಬಹುದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಅಭಿಯಾನ ಭಾನುವಾರದಿಂದ ಆರಂಭವಾಗಿದ್ದು, ಐಸಿಸಿ ತನ್ನ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕೊರೋನಾ ಸೋಂಕಿಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಗೊಳಿಸಿದ್ದು, ಕೊರೋನಾ ಸೋಂಕಿತ ಆಟಗಾರರಿಗೂ ವಿಶ್ವಕಪ್‌ನಲ್ಲಿ ಆಡಲು ಅವಕಾಶ ನೀಡಲಾಗಿದೆ.

ಈ ಹಿಂದೆ ಯಾವುದೇ ಆಟಗಾರರಿಗೆ ಸೋಂಕು ತಗುಲಿದರೆ ಆಟಗಾರ ತಂಡದಿಂದ ದೂರ ಇರಬೇಕಿತ್ತು, ಕ್ವಾರೆಂಟೀನ್‌ನಲ್ಲಿ ಇರಬೇಕಿತ್ತು. ಆದರೆ ಇದೀಗ ನಿಯಮಗಳು ಇಷ್ಟು ಕಠಿಣವಾಗಿಲ್ಲ. 2022ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಲ್ಲಿ ಕೊರೋನಾ ಸೋಂಕಿನ ಆಟಗಾರರಿಗೆ ಆಡಲು ಅವಕಾಶ ನೀಡಿತ್ತು. ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ತಹ್ಲಿಯಾ ಮೆಕ್‌ಗ್ರಾತ್‌ಗೆ ಸೋಂಕು ತಗುಲಿತ್ತು. ಆದರೂ ಆಡಲು ಅವಕಾಶ ನೀಡಿದ್ದು, ಮಾಸ್ಕ್, ಹಾಕಿ ಪ್ರತ್ಯೇಕವಾಗಿ ಕೂರಲು ಸೂಚಿಸಲಾಗಿತ್ತು,

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!