T20 ವಿಶ್ವಕಪ್ ಕ್ವಾಲಿಫೈಯರ್ ಮ್ಯಾಚ್: ಕೇವಲ 8 ರನ್​​ಗಳಿಗೆ ನೇಪಾಳ ಆಲೌಟ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಸಿಸಿ ಅಂಡರ್​​-19 ಮಹಿಳೆಯರ ಟಿ-20 ವಿಶ್ವಕಪ್​ನ ಅರ್ಹತಾ ಪಂದ್ಯದಲ್ಲಿ ನೇಪಾಳ ತಂಡ ಕೇವಲ 8ರನ್​​ಗಳಿಗೆ ಆಲೌಟ್​ ಆಗಿದೆ. ಈ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಅತಿ ಕಡಿಮೆ ರನ್​​ಗಳಿಗೆ ಆಲೌಟ್​ ಆಗಿರುವ ಮಹಿಳಾ ತಂಡವಾಗಿ ಹೊರಹೊಮ್ಮಿದೆ.
ಐಸಿಸಿ ಅಂಡರ್​-19 ಟಿ20 ವಿಶ್ವಕಪ್ ಕ್ವಾಲಿಫೈಯರ್​ ಪಂದ್ಯದಲ್ಲಿ ನೇಪಾಳ ಹಾಗೂ ಯುಎಇ ಮಹಿಳಾ ತಂಡ ಮುಖಾಮುಖಿಯಾಗಿದ್ದು,ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ನೇಪಾಳ ತಂಡ 8.1 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್​ ಆಗಿದೆ. ಈ ಗುರಿ ಮುಟ್ಟಲು ಎದುರಾಳಿ ತಂಡ ಯುಎಇ 1.1 ಓವರ್ ನಲ್ಲಿ ಪಂದ್ಯ ಮುಗಿಸಿದೆ​.
ಅಂಡರ್​ 19 ಟಿ20 ವಿಶ್ವಕಪ್​​ ಅರ್ಹತಾ ಪಂದ್ಯದಲ್ಲಿ ನೇಪಾಳ, ಯುಎಇ, ಥಾಯ್ಲೆಂಡ್​, ಭೂತಾನ್ ಮತ್ತು ಕತಾರ್ ಭಾಗಿಯಾಗಿವೆ. ಇಲ್ಲಿ ಗೆಲುವು ಸಾಧಿಸುವ ತಂಡ ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಟೂರ್ನಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!