ಟಿ20 ವಿಶ್ವಕಪ್​ ಟೂರ್ನಮೆಂಟ್: ಭಾರತ-ಪಾಕ್ ಪಂದ್ಯದ ಎಲ್ಲ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಿ20 ವಿಶ್ವಕಪ್​ ಟೂರ್ನಮೆಂಟ್ ಅರಂಭಕ್ಕೆ ಇನ್ನು ಒಂದು ತಿಂಗಳು ಬಾಕಿಯಿದ್ದು, ಈ ಕೂಟದ ಅತೀ ಆಕರ್ಷಕ ಪಂದ್ಯ ಭಾರತ-ಪಾಕಿಸ್ತಾನ ನಡುವೆ ಅಕ್ಟೋಬರ್​​​ 23 ರಂದು ನಡೆಯಲಿದೆ. ಈ ಪಂದ್ಯ ವೀಕ್ಷಣೆಗೆ ಈಗಲೇ ಕೋಟ್ಯಂತರ ಜನರು ಕಾತುರದಿಂದ ಕಾಯ್ತಿದ್ದು, ಟಿಕೆಟ್‌ ಖರೀದಿಗೆ ಮುಗಿಬಿದ್ದಿದ್ದಾರೆ.
ಉಭಯ ತಂಡಗಳ ಮಧ್ಯೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​​ನಲ್ಲಿ ಪಂದ್ಯ ನಡೆಯಲಿದೆ. ಕ್ರಿ ಇಲ್ಲಿಯವರೆಗೆ ಎಲ್ಲ ಪಂದ್ಯಗಳ ವೀಕ್ಷಣೆಗೋಸ್ಕರ 5 ಲಕ್ಷಕ್ಕೂ ಅಧಿಕ ಟಿಕೆಟ್​​ಗಳು ಮಾರಾಟಗೊಂಡಿವೆ. 82 ರಾಷ್ಟ್ರದ ಕ್ರಿಕೆಟ್ ಪ್ರೇಮಿಗಳು ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್​​ನಲ್ಲಿ 16 ತಂಡಗಳು ಸೆಣಸಾಟ ನಡೆಸಲಿವೆ.ಅಕ್ಟೋಬರ್​​ 16 ರಿಂದ ಆರಂಭಗೊಂಡು ನವೆಂಬರ್​​ 13ರಂದು ಫೈನಲ್​ ನಡೆಯಲಿದ್ದು, ಪಂದ್ಯಕ್ಕಾಗಿ ಮುಂಗಡವಾಗಿ 86,174 ಜನರು ಟಿಕೆಟ್ ಬುಕ್​ ಮಾಡಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ನಡುವಿನ ಪಂದ್ಯದ ಟಿಕೆಟ್‌ಗಳೂ ಸಹ ಸೋಲ್ಡ್ ಔಟ್​ ಆಗಿವೆ. ಉಳಿದ ಪಂದ್ಯಗಳ ಕೆಲ ಟಿಕೆಟ್​ಗಳು ಮಾತ್ರ ಬಾಕಿ ಉಳಿದಿವೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!