ಪ್ರಧಾನಿ ಮೋದಿಯವರ ಹುಟ್ಟುಹಬ್ಬಕ್ಕೆ ಕೈಗೊಂಡ ಜನಸ್ನೇಹಿ ಕಾರ್ಯಕ್ರಮಗಳೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಹಾಗೂ ಜಗತ್ತಿನ ನಾಯಕರಾಗಿರುವ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಸೆ.17ರಂದು ಜನಸ್ನೇಹಿ ಕಾರ್ಯಕ್ರಮವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.

ಮೋದಿಯವರು ಹೇಗೆ ಬಡವರ, ದಲಿತರ ಮತ್ತು ಶೋಷಿತರ, ಮಹಿಳೆಯರ, ಅಂಗವಿಕಲರ ಹಾಗೂ ಪರಿಸರದ ಪರ ಎಂಬುದರ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆ ದಿನ ಹಮ್ಮಿಕೊಳ್ಳಲಾಗುವುದು.

ಪ್ರಧಾನಿ ಹುಟ್ಟುಹಬ್ಬಕ್ಕೆ ಕೈಗೊಳ್ಳುವ ಸೇವಾ ಕಾರ್ಯಗಳು

  • ಮೋದಿ ಪರಿಚಯದ ದೃಷ್ಟಿಯಿಂದ “ಮೋದಿ @20 ಡ್ರೀಮ್ ಮೀಟ್ ಡೆಲಿವರಿ” ಪುಸ್ತಕ ಬಿಡುಗಡೆ
  • ಯುವ ಮೋರ್ಚಾ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 11 ಸಾವಿರ ಯೂನಿಟ್ ರಕ್ತದಾನ
  •  ಸಸಿ ನೆಡುವುದಲ್ಲದೆ, ಸಸಿ ದತ್ತು ಪಡೆಯುವ ಕಾರ್ಯಕ್ರಮ
  • ದಿವ್ಯಾಂಗರಿಗೆ ಅಗತ್ಯ ಉಪಕರಣ ವಿತರಣೆ
  • ʻಕ್ಯಾಚ್ ದಿ ರೈನ್ʼ ಅಡಿಯಲ್ಲಿ ನೀರು ಮರುಪೂರಣ ಅಭಿಯಾನ
  • ʻವೋಕಲ್ ಫಾರ್ ಲೋಕಲ್ʼ ಧ್ಯೇಯವಾಕ್ಯದಡಿ ಸ್ಥಳೀಯ ವಸ್ತುಗಳ ಬಳಕೆ ಅಭಿಯಾನ
  •  ಗಾಂಧಿ ಜಯಂತಿಯಂದು ಒಂದು ಜೊತೆ ಖಾದಿ ಡ್ರೆಸ್ ಖರೀದಿ, ಖಾದಿ ಕರ್ಚೀಪ್, ಖಾದಿ ಟವೆಲ್ ಬಳಕೆ ಅಭಿಯಾನ
  • ಸ್ವಚ್ಛತಾ ಅಭಿಯಾನದಡಿ ಪ್ರತಿ ಜಿಲ್ಲೆಗಳಲ್ಲಿ 75 ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ನಿರ್ಮಾಣ
  • ಕ್ಷಯರೋಗ ಮುಕ್ತ ಅಭಿಯಾನಕ್ಕೆ ಪ್ರಧಾನಿಯವರು ಕರೆಯಂತೆ ಕ್ಷಯರೋಗಿಗಳಿಗೆ ಔಷಧಿ ವಿತರಣೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!