ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಕೆದಾಟು ಯೋಜನೆ ಆಗ್ರಹಕ್ಕೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ.
ಈ ವೇಳೆ ಯಾವ ಸಾಮಾಜಿಕ ಅಂತರವೂ ಇಲ್ಲದೆ, ಯಾವ ಮಾಸ್ಕ್ ಕೂಡ ಧರಿಸದೆ ಯಾತ್ರೆ ಸಾಗುತ್ತಿದೆ. ಇದು ಕೊರೋನಾ ಮೂರನೇ ಅಲೆಗೆ ಕಾರಣವಾಗುತ್ತದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ್ದು, ತಬ್ಲಿಘಿಗಳ ರೀತಿ ಕಾಂಗ್ರೆಸ್‌ನವರು ಕೊರೋನಾ ಹಂಚುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ=ತಬ್ಲಿಘಿ.
ಯಾಕೆಂದರೆ ಇಬ್ಬರೂ ಹರಡುತ್ತಿರೋದು ಕೊರೋನಾ ಸೋಂಕು. ತಬ್ಲಿಘಿಗಳು ಮೊದಲ ಅಲೆಗೆ ಕಾರಣವಾದರೆ ಕಾಂಗ್ರೆಸ್‌ನವರು ಮೂರನೇ ಅಲೆಗೆ ಕಾರಣವಾಗುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಹೇಳಿದೆ.
ಕಾಂಗ್ರೆಸ್ ಪಾದಯಾತ್ರೆ = ತಬ್ಲಿಘಿ
ಇಬ್ಬರೂ ಹರಡುತ್ತಿರುವುದು ಕೋವಿಡ್ ಸೋಂಕು. ತಬ್ಲಿಘಿಗಳು ಮೊದಲನೇ ಅಲೆಗೆ ಕಾರಣರಾದರೆ ಕಾಂಗ್ರೆಸ್ಸಿಗರು ಮೂರನೇ ಅಲೆಗೆ ಕಾರಣವಾಗುತ್ತಿದ್ದಾರೆ.#ಸುಳ್ಳಿನಜಾತ್ರೆ #ಕೋವಿಡ್ಯಾತ್ರೆ
— BJP Karnataka (@BJP4Karnataka) January 11, 2022
ಕೊರೋನಾ ಸ್ಪೈಡರ್ ಡಿಕೆ ಸೋದದರೆ, ನಿಮ್ಮ ಸುಳ್ಳಿನ ಜಾತ್ರೆ ಪ್ರಹಸನದಲ್ಲಿ ಇಪ್ಪತ್ತು ನಿಮಿಷ, ಅರ್ಧ ಗಂಟೆ ನಡೆದ ಕಾಂಗ್ರೆಸ್ ಪುಡಾರಿಗಳೆಲ್ಲ ಈಗ ಬೆಂಗಳೂರಿಗೆ ಬರುತ್ತಿದ್ದಾರೆ. ಅವರೆಲ್ಲರೂ ಕೋವಿಡ್ ಸೋಂಕಿನ ಸಂಭಾವ್ಯ ವಾಹಕಗಳು. ರಾಜಧಾನಿಗೆ ಕೊರೋನಾ ಹಬ್ಬಿಸೋದು ನಿಮ್ಮ ಉದ್ದೇಶವಾ? ಎಂದು ಬಿಜೆಪಿ ಪ್ರಶ್ನಿಸಿದೆ.