ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್ ಮನೆ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಜಬಲ್ಪುರದ ಜಿತೇಶ್ ಠಾಕೂರ್ ಬೆದರಿಕೆ ಕರೆ ಮಾಡಿದ ಆರೋಪಿ.
ಆರೋಪಿ ಜಿತೇಶ್ ಮಹಾರಾಷ್ಟ್ರ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಶಾರುಖ್ ಮನೆ ಸ್ಫೋಟಿಸುತ್ತೇನೆ ಎಂದು ಹೇಳಿದ್ದ. ಇದಲ್ಲದೆ ಇನ್ನೂ ಹಲವು ಕಡೆ ಬಾಂಬ್ ಇಟ್ಟು ಸ್ಫೋಟ ನಡೆಸುವ ಬಗ್ಗೆಯೂ ಈತ ಹೇಳಿದ್ದ.
ನಂಬರ್ ಟ್ರೇಸ್ ಮಾಟಿದ ಪೊಲೀಸರಿಗೆ ಇದು ಮಧ್ಯಪ್ರದೇಶದ ಜಬಲ್ಪುರದಿಂದ ಬಂದ ಕರೆ ಎಂದು ತಿಳಿದಿದೆ. ನಂತರ ಆರೋಪಿಯನ್ನು ಬಂಧಿಸಿದ್ದಾರೆ.