ಬೌಲರ್‌ಗಳು ಗೆರೆ ಹಿಂದಿನಿಂದ ಬಾಲ್‌ ಎಸೆಯಬೇಕೆಂದರೆ, ಬ್ಯಾಟರ್‌ಗೂ ಅದೇ ನಿಯಮ ಅನ್ವಯ: ದೀಪ್ತಿ ಬೆಂಬಲಕ್ಕೆ ನಿಂತ ಶಮ್ಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕ್ರಿಕೆಟ್‌ ನಲ್ಲಿ ಗೊಂದಲಗಳನ್ನು ತಪ್ಪಿಸಲೆಂದೇ ನಿಯಮಗಳನ್ನು ರೂಪಿಸಲಾಗಿದೆ. ಬೌಲರ್‌ ಗಳು ನಿಗದಿತ ಗೆರೆಯ ಹಿಂದೆ ನಿಂತು ಬಾಲ್‌ ಎಸೆಯಬೇಕೆಂಬ ನಿಯಮವಿರುವುದಾದರೆ, ಬ್ಯಾಟರ್‌ಗೂ ಅದೇ ನಿಯಮ ಅನ್ವಯಿಸುತ್ತದೆ. ಬ್ಯಾಟರ್‌ಗಳು ಸಹ ಎಸೆತ ಎಸೆಯುವುದಕ್ಕಿಂತ ಮುನ್ನ ಲೈನ್‌ನ ಹಿಂದೆ ಉಳಿಯಬೇಕು ಎಂದು ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೈಜ್ ಶಮ್ಸಿ ಅಭಿಪ್ರಾಯಪಟ್ಟಿದ್ದಾರೆ.
ಈ ವಾರದ ಆರಂಭದಲ್ಲಿ ನಡೆದ ಲಾರ್ಡ್ಸ್ ಏಕದಿನ ಪಂದ್ಯದಲ್ಲಿ ದೀಪ್ತಿ ಶರ್ಮಾ ಇಂಗ್ಲೆಂಡ್ ಬ್ಯಾಟರ್‌  ಚಾರ್ಲೊಟ್ ಡೀನ್ ಅವರನ್ನು ಮಂಕಡಿಂಗ್‌ (ಈಗ ರನ್‌ ಔಟ್) ಔಟ್ ಮಾಡಿದ್ದು ದೊಡ್ಡ ವಿವಾದವಾಗಿ ಮಾರ್ಪಟ್ಟಿತ್ತು. ಈ ಮಾದರಿಯ ರನ್‌ ಔಟ್‌ ಮೂಲಕ ಭಾರತ ಪಂದ್ಯ ಗೆದ್ದಿದ್ದು ಕ್ರೀಡಾಸ್ಫೂರ್ತಿಯಲ್ಲ ಎಂದು ಹಲವಾರು ಇಂಗ್ಲಿಷ್‌ ಕ್ರಿಕೆಟಿಗರು ಹುಯಿಲಿಟ್ಟಿದ್ದಾರೆ. ಮತ್ತೊಂದು ವಿಚಾರವೆಂದರೆ ಈ ಮಾದರಿಯ ರನ್‌ ಔಟ್‌ ಸಂಪೂರ್ಣ ನಿಯಮಬದ್ಧವೆಂದು ಕೆಲವೇ ದಿನಗಳ ಹಿಂದೆ ಐಸಿಸಿ ಸಹ ಘೋಷಿಸಿತ್ತು.
ಹಲವಾರು ಕ್ರಿಕೆಟಿಗರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ ಮತ್ತು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಈ ಪ್ರತಿಕ್ರಿಸಿರುವ ಸೌತ್‌ ಆಫ್ರಿಕಾ ಸ್ಪಿನ್ನರ್ ಶಮ್ಸಿ ದೀಪ್ತಿ ಶರ್ಮಾ ನಡೆಯನ್ನು ಬೆಂಬಲಿಸಿದ್ದಾರೆ. ಬ್ಯಾಟರ್‌ಗಳು ಮತ್ತು ಬೌಲರ್‌ಗಳು ನಿಗದಿಪಡಿಸಿದ ಲೈನ್‌ಗೆ ಗೌರವ ನೀಡಿ ʼನ್ಯಾಯಯುತವಾಗಿʼ ಆಡಬೇಕು ಎಂದು ಹೇಳಿದರು.
“ಅದರ ಬಗ್ಗೆ ನನ್ನ ಅಭಿಪ್ರಾಯಗಳು ಸ್ಪಷ್ಟವಾಗಿವೆ. ನನ್ನ ಮಟ್ಟಿಗೆ, ಬೌಲರ್‌ಗಳು ತಮ್ಮ ಪಾದವನ್ನು ರೇಖೆಯ ಹಿಂದೆ ಇಟ್ಟುಕೊಳ್ಳದಿದ್ದರೆ ಅದು ನೋಬಾಲ್‌ ಆಗುತ್ತದೆ. ಹಾಗಿದ್ದ ಮೇಲೆ  ಬ್ಯಾಟರ್‌ಗಳು ಸಹ ಅದೇ ರೀತಿ ಮಾಡಬೇಕು. ಆದರೆ ಅವರಿಗೆ ನಿಯಮ ಅನ್ವಯಿಸುವುದಿಲ್ಲ ಎಂಬುದು ಸರಿಯಲ್ಲ. ಎರಡೂ ಕಡೆಯವರು ನ್ಯಾಯಯುತವಾಗಿ ಆಡಬೇಕು, ”ಎಂದು ಶಮ್ಸಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!